Thursday, July 23, 2026
Homeಜಿಲ್ಲೆಮಂಗಳೂರು : ಕಪಿತಾನಿಯೊ ಮತಗಟ್ಟೆಯಲ್ಲಿ ಕಾರ್ಯಕರ್ತರಿಂದ ಗೂಂಡಾಗಿರಿ,ಬಿಜೆಪಿ ನಾಯಕನನ್ನು ಒದ್ದೋಡಿಸಿದ ಪೊಲೀಸ್ ಅಧಿಕಾರಿ .

ಮಂಗಳೂರು : ಕಪಿತಾನಿಯೊ ಮತಗಟ್ಟೆಯಲ್ಲಿ ಕಾರ್ಯಕರ್ತರಿಂದ ಗೂಂಡಾಗಿರಿ,ಬಿಜೆಪಿ ನಾಯಕನನ್ನು ಒದ್ದೋಡಿಸಿದ ಪೊಲೀಸ್ ಅಧಿಕಾರಿ .

ಮಂಗಳೂರು : ಕಪಿತಾನಿಯೊದಲ್ಲಿರುವ ಇರುವ ಮತಗಟ್ಟೆಯ ಬಳಿ ಬಿಜೆಪಿ ಕಾರ್ಯಕರ್ತ ಸಂದೀಪ್ ಯೆಕ್ಕೂರು ಎಂಬುವರನ್ನು ಮತಗಟ್ಟೆಯ 100 ಮೀಟರ್ ಅಂತರದಲ್ಲಿ ನಿಲ್ಲಬಾರದೆಂಬ ನೀಯಮ ಇರವುದರಿಂದ ಈ ಬಗ್ಗೆ ಪ್ರಶ್ನಿಸಿದ ಕಂಕನಾಡಿ ನಗರ ಠಾಣೆಯ ಇನ್ಸ್ಪೆಕ್ಟರ್ ನಾಗರಾಜ್ ಹಾಗೂ ಸಂದೀಪ್ ಎಕ್ಕೂರ್ ರವರ ನಡುವೆ ವಾಗ್ವಾದ ಉಂಟಾಗಿದ್ದು ಕೆಲಸಮಯ ಗೊಂದಲಮಯ ವಾತಾವರಣ ಉಂಟಾಯಿತು. ಮತಗಟ್ಟೆಗೆ ಅಡ್ಡಿಪಡಿಸಿ ಪೊಲೀಸ್ ಅಧಿಕಾರಿಯನ್ನು ತಳ್ಳಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಘಟನೆ ವರದಿಯಾಗಿದೆ.

ಪೊಲೀಸ್ ಅಧಿಕಾರಿಗಳು ಕಾನೂನಿನ ಪ್ರಕಾರ ಮತದಾನ ನಡೆಯುವ ಸ್ಥಳದಲ್ಲಿ ನಿಲ್ಲಬಾರದೆಂದು ಅನೇಕ ಬಾರಿ ಹೇಳಿಕೋಂಡರು ಕ್ಯಾರೇ ಅನ್ನದ ಸಂದೀಪ್ ಎಕ್ಕೂರ್ ರವರನ್ನು ಪೊಲೀಸರು ತಳ್ಳಿಕೊಂಡು ಹೋಗುವ ಪ್ರಸಂಗ ನಡೆದಿದೆ. ಈ ಘಟನೆಯನ್ನು ರೆಕಾರ್ಡ್ ಮಾಡುತ್ತಿದ್ದ ಮಾಧ್ಯಮದ ಸದಸ್ಯರನ್ನು ಸಹ ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಮಾತಿನ ಚಕಮಕಿನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular