ಮಂಗಳೂರು ; ISIS ಉಗ್ರ ಸಂಘಟನೆ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಹೊಣೆ ಹೊತ್ತ ವಿಚಾರವಾಗಿ ರಾಜ್ಯ ಬಿಜೆಪಿ ಅದ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಅಟೋ ಚಾಲಕ ಪುರುಷೊತ್ತಮ ಪೂಜಾರಿ ಅವರ ಅಟೋ ಸಂಪೂರ್ಣ ಹಾನಿಯಾಗಿದ್ದು ಬಿಜೆಪಿ ಪಕ್ಷದ ವತಿಯಿಂದ ಇಂದು ಹೊಸ ಅಟೋ ಹಾಗೂ ಐದು ಲಕ್ಷ ಆರ್ಥಿಕ ನೆರವು ನೀಡಲಾಗಿತ್ತು. ಇದೇ ವೇಳೆ ಮಾದ್ಯಮಗಳ ಜೊತೆ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ರು.
ಹತ್ತಾರು ವರ್ಷಗಳಿಂದ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ನಡೀತಾ ಇದೆ. ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಬೇಕೆನ್ನುವುದೇ ಈ ಉಗ್ರ ಚಟುವಟಿಕೆಯ ಉದ್ದೇಶವಾಗಿದ್ದು ಅದಕ್ಕಾಗಿ ಹಲವು ವರ್ಷಗಳಿಂದ ಪ್ರಯತ್ನ ನಡೆತುತ್ತಿದೆ. ಆದರೆ ಮೋದಿ ಪ್ರಧಾನಿಯಾದ ಬಳಿಕ ಈ ಷಡ್ಯಂತ್ರ ನಿಲ್ಲಿಸು ಕೆಲಸ ಯಶಸ್ವಿಯಾಗಿ ಆಗಿದೆ.
ಹೀಗಾಗಿ ಇವತ್ತು ಭಯೋತ್ಪಾದನಾ ಚಟುವಟಿಕೆ ಕಡಿಮೆ ಆದ್ರೂ ಅಲ್ಲಲ್ಲಿ ಸಣ್ಣದಾಗಿ ನಡೀತಾ ಇದೆ. ಮಂಗಳೂರು ಬ್ಲಾಸ್ಟ್ ಘಟನೆ ಇಸ್ಲಾಮಿಕ್ ರಾಷ್ಟ್ರ ಮಾಡ್ತೀವಿ ಅಂತ ಆ ಸಂಸ್ಥೆ ಹೇಳಿದೆ. ಕೇಂದ್ರ ಸರ್ಕಾರ ಇದರ ಬಗ್ಗೆ ಗಮನ ಹರಿಸಿದ್ದು ಸೂಕ್ತ ಕ್ರಮಕೈಗೊಳ್ಳಲಿದೆ. ಆದ್ರೆ ಕಾಂಗ್ರೆಸ್ ಪಕ್ಷ ಉಗ್ರ ಚಟುವಟಿಕೆ ನಡೆದಾಗ ಅವರ ಪರ ನಿಲ್ಲುತ್ತದೆ ಅದನ್ನು ಪ್ರಶ್ನೆ ಮಾಡಬೇಕಾಗಿದೆ. ಕಾಂಗ್ರೆಸ್ ಭಯೋತ್ಪಾದನೆಯನ್ನು ಬೆಂಬಲಿಸುವ ಪಕ್ಷವೇ ಎಂದು ಪ್ರಶ್ನೆ ಮಾಡಬೇಕಾಗಿದೆ. ಕುಕ್ಕರ್ ಬ್ಲಾಸ್ಟ್ ನಲ್ಲಿ ಗಾಯಗೊಂಡ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಒಬ್ಬ ಅಮಾಯಕ. ಆದರೆ ಕಾಂಗ್ರೆಸ್ ಎನ್.ಐ.ಎ ಬಂಧಿಸಿದ ಉಗ್ರನನ್ನೇ ಅಮಾಯಕ ಎನ್ನುತ್ತಾರೆ. ಉಡುಪಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಗನನ್ನೇ ಎನ್‌ಐಎ ಬಂಧಿಸಿದೆ. ಆದರೆ ಇವತ್ತಿನವರೆಗೆ ಕಾಂಗ್ರೆಸ್ ಅವನನ್ನ ಪಕ್ಷದಿಂದ ಉಚ್ಚಾಟನೆ ಮಾಡಿಲ್ಲ. ಅವನನ್ನ ಇನ್ನೂ ಪಕ್ಷದಲ್ಲಿ ಇಟ್ಟುಕೊಂಡಿದೆ ಅಂದ್ರೆ ಭಯೋತ್ಪಾದಕರು ಕಾಂಗ್ರೆಸ್ ನಲ್ಲಿ ಇದಾರೆ ಅನ್ನೋದು ಸ್ಪಷ್ಟವಾಗುತ್ತದೆ.
ಕಾಂಗ್ರೆಸ್ ನ ಈ ತುಷ್ಟೀಕರಣದ ನೀತಿಯಿಂದ ಭಯೋತ್ಪಾದನಾ ಚಟುವಟಿಕೆ ಈಗ ಹಳ್ಳಿಗಳಿಗೂ ತಲುಪುವಂತಾಗಿದೆ ಎಂದು ನಳಿನ್ ಕುಮಾರದ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.