ಮಂಗಳೂರು: ಈಗ ಕನಿಷ್ಟ ದರ ಆಂದರೆ ಮೊದಲ ಒಂದುವರೆ ಕಿಲೋ ಮೀಟರಿಗೆ 35 ರೂಪಾಯಿ ಹಾಗೂ ನಂತರದ ಪ್ರತಿ 1 ಕಿಲೋ ಮೀಟರಿಗೆ 20 ರೂಪಾಯಿ ದರವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿಗದಿಪಡಿಸಿದೆ.ಮಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ಪ್ರಯಾಣಕ್ಕೆ ಸಂಬಂಧಿಸಿ ಪರಿಷ್ಕೃತ ಬಾಡಿಗೆ ದರ ಇಂದಿನಿಂದ ಜಾರಿಗೆ ಬಂದಿದೆ.
ರಿಕ್ಷಾ ಚಾಲಕರೆಲ್ಲ ಇಂದು ಈ ಕಾಯಕದಲ್ಲಿ ನಿರತರಾಗಿದ್ದರು. ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಪರವಾನಿಗೆ ಪಡೆದ ಮೀಟರ್ ದುರಸ್ತಿ ಸಂಸ್ಥೆಗಳ ಮುಂಭಾಗದಲ್ಲಿ ಇಂದು ರಿಕ್ಷಾ ಚಾಲಕ ಮಾಲಕರ ದಂಡೇ ಸೇರಿತ್ತು. ಪರಿಷ್ಕೃತ ಬಾಡಿಗೆ ದರವನ್ನು ರಿಕ್ಷಾಗಳ ಡಿಜಿಟಲ್ ಮೀಟರ್‌ಗಳಲ್ಲಿ ನಮೂದಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇಲಾಖೆಯ ಅಧಿಕಾರಿಗಳು ರಿಕ್ಷಾದಲ್ಲಿ ಪ್ರಯಾಣಿಸಿ ಬೆಂಚ್ ಟೆಸ್ಟ್ ಮತ್ತು ರೋಡ್ ಟೆಸ್ಟ್ ನಡೆಸಿ ಮುದ್ರೆ ಹಾಕಿ ಸತ್ಯಾಪನ ಪ್ರಮಾಣ ಪತ್ರ ನೀಡಿದರು.