ಮಂಗಳೂರು ; ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ನಿರೀಕ್ಷಕರು ಮಹೇಶ್ ಪ್ರಸಾದ್ ಮತ್ತು ಉಪ ಪೊಲೀಸ್ ನಿರೀಕ್ಷಕರಾದ ಮಲ್ಲಿಕಾರ್ಜುನ್, ಅರುಣ್ ಕುಮಾರ್ ಡಿ , ನೇತೃತ್ವದಲ್ಲಿ ಪ್ರತ್ಯೇಕ ವಾಗಿ ಸುರತ್ಕಲ್ ಗ್ರಾಮ ಮುಂಚೂರು ಎಂಬಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 100 ಲೋಡ್ ನಷ್ಟು ಮರಳ ನ್ನು ಮತ್ತು ಚೇಳ್ಯಾರು ಗ್ರಾಮ ದಲ್ಲಿ 150 ಲೋಡ್ ನಷ್ಟು ಮರಳನ್ನು ಇಂದು ದಾಳಿ ನಡೆಸಿ ಅಕ್ರಮ ವಾಗಿ ದಾಸ್ತಾನು ಮಾಡಿದ್ದ ಒಟ್ಟು ಸುಮಾರು 35 ಲಕ್ಷ ಬೆಲೆ ಬಾಳುವ ಮರಳನ್ನು ವಶ ಪಡಿಸಿಕೊಂಡಿದ್ದಾರೆ.
ಪ್ರಸ್ತುತ ರಾಜಕೀಯ ವ್ಯಕ್ತಿಗಳ ಕೈವಾಡವಿರುವುದರಿಂದ ಅಕ್ರಮ ಮರಳು ದಂದೆ ಸರಾಗವಾಗಿ ನಡೆಯುತ್ತಿದ್ದು, ಸಾಮಾಜಿಕ ಕಾರ್ಯಕರ್ತರ ಕೃಪೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸರಾಗವಾಗಿ ಅಕ್ರಮ ಮರಳು ದಂಧೆ ಯ ಕಾರ್ಯಚರಣೆ ಪ್ರಸಾರವಾಗುವುದರಿಂದ ಇಲಾಖೆ ಹಾಗೂ ರಾಜಾಕಾರಣಿಗಳು ಬೇಸತ್ತು ಹೋಗಿದ್ದಾರೆ.
ಮರಳು ದಾಸ್ತಾನು ಇರಿಸಿದ್ದ ಭೂ ಮಾಲೀಕರ ವಿರುದ್ದ ಕೇಸ್ ದಾಖಲಿಸಿದ್ದು, ಮರಳು ಯಾರಿಗೆ ಸೇರಿದ್ದು ಎಂಬ ಬಗ್ಗೆ ತನಿಕೆ
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿದೆ.