ಬೆಳಗಾವಿ : ಬೆಳಗಾವಿಯ ಉದ್ಯಮಬಾಗ ಠಾಣೆ ಸಿಪಿಐ ಧರೇಗೌಡ ಪಾಟೀಲ್ ವಿರುದ್ಧ ಡೆತ್ ನೋಟ್ ಬರೆದಿತ್ತು ಪೇದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಡೆತ್ ನೋಟ್ ಬರೆದ ಪೇದೆಯನ್ನು ವಿಠ್ಠಲ್ ಮುನಿಹಾಳ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ ನೋಟ್ ಶೇರ್ ಮಾಡಿ ಹೋಗಿದ್ದ ಬಳಿಕ ಗೆಳೆಯರು ಪೇದೆಯನ್ನು ಹುಡುಕಿ ಮನಹೋಲಿಸಿ ಠಾಣೆಗೆ ಕರೆತಂದಿದ್ದಾರೆ. ಠಾಣೆಯಲ್ಲಿ ಜಾತಿಯತೆ ಮಾಡುತ್ತಿದ್ದಾರೆ,ಹಪ್ತಾ ವಸೂಲಿ ಮಾಡಿಕೊಡುವ ಸಿಬ್ಬಂದಿಗೆ ರಾತ್ರಿ ಕರ್ತವ್ಯ ಇಲ್ಲ. ರಜೆ ಕೊಡುವುದರಲ್ಲಿ ಸಾಕಷ್ಟು ಕಿರುಕುಳ ಕೊಡ್ತಿದ್ದಾರೆ. ಅಕ್ಕನ ಮದುವೆಗೆ ರಜೆ ಪಡೆದು ವಾಪಾಸ್ ಆದಾಗ ಅವಾಚ್ಯವಾಗಿ ನಿಂದಿಸಿ.ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಕರ್ತವ್ಯದಲ್ಲಿದ್ರೂ ಗೈರು ಅಂತಾ ಹೇಳಿ ಮೇಮೊ ಜಾರಿ ಮಾಡಿದ್ದೂ ಮಾನಸಿಕವಾಗಿ ತೊಂದರೆ ಕೊಟ್ಟಿದ್ದಾರೆ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.
ಪಿಐ ಅವರ ಇನ್ನೂ ಹಲವು ವಿಷಯಗಳು ಮೊಬೈಲ್ ನಲ್ಲಿ ಶೇಖರಿಸಿ ಇಟ್ಟಿದ್ದೇನೆ. ಸಿಪಿಐ ಧರೇಗೌಡ ಪಾಟೀಲ್ ಮೇಲೆ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದು ಹದಿನೈದು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ.