Friday, July 24, 2026
Homeರಾಜ್ಯಬೆಳಗಾವಿ : ಚಾಲುಕ್ಯ ಎಕ್ಸ್ ಪ್ರೆಸ್ ರೈಲಿನಲ್ಲಿ TTE ಸೇರಿ ಐವರ ಮೇಲೆ ಮಾರಣಾಂತಿಕ ಹಲ್ಲೆ...

ಬೆಳಗಾವಿ : ಚಾಲುಕ್ಯ ಎಕ್ಸ್ ಪ್ರೆಸ್ ರೈಲಿನಲ್ಲಿ TTE ಸೇರಿ ಐವರ ಮೇಲೆ ಮಾರಣಾಂತಿಕ ಹಲ್ಲೆ , ಓರ್ವ ಸಾವು.

ಬೆಳಗಾವಿ : ಕೆಲಸದ ಮೇಲೆ ಇರುವ TC ಟಿಕೆಟ್ ತೋರಿಸಿ ಎಂದಿದ್ದಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಐವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಬಳಿ ನಡೆದಿದೆ. ಈ ಘಟನೆಯಲ್ಲಿ ರೈಲ್ವೆ ಇಲಾಖೆ ನೌಕರನೊಬ್ಬನನ್ನು ಬರ್ಬರವಾಗಿ ಇರಿದು ಕೊಂದ ವರದಿಯಾಗಿದೆ.ಅಲ್ಲದೇ ಟಿಟಿಇ ಸೇರಿದಂತೆ ಮೂವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಅಮಾನುಷ ಘಟನೆ ಗುರುವಾರ ಸಂಜೆ ಈ ನಡೆದಿದೆ.

ಟಿಕೆಟ್ ಇಲ್ಲದೆ ಅಪರಿಚಿತ ಪ್ರಯಾಣಿಕ ಪ್ರಯಾಣಿಸುತಿದ್ದು ಟಿಟಿಇ ಆತನನ್ನು ಟಿಕೆಟ್ ಕೇಳಿದಾಗ ಪ್ರಯಾಣಿಕ ವಾಗ್ವಾದಕ್ಕಿಳಿದಿದ್ದಾರೆ,ಮತ್ತೊಮ್ಮೆ ಟಿಟಿಇ ಟಿಕೆಟ್ ನೀಡುವಂತೆ ಕೇಳಿದಾಗ ದಾಳಿಕೋರನು ಇರಿದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. TTE ಮೇಲಿನ ಹಲ್ಲೆಯನ್ನು ತಡೆಯಲು ಕೋಚ್ ಅಟೆಂಡೆಂಟ್ ಮಧ್ಯಪ್ರವೇಶಿಸಿದಾಗ ಆತನಿಗೂ ಇರಿದು ಹತ್ಯೆ ಮಾಡಿದ್ದಾನೆ. ನಾಲ್ವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಬಳಿಕ ಅಪರಿಚಿತ ಪ್ರಯಾಣಿಕ ಖಾನಾಪುರ ರೈಲು ನಿಲ್ದಾಣದ ಬಳಿ ರೈಲಿನಿಂದ ಹಾರಿ ಪರಾರಿಯಾಗಿದ್ದಾನೆ.

ಆರೋಪಿಯ ಪತ್ತೆಗೆ ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ. ಸ್ಥಳಕ್ಕೆ ಬೆಳಗಾವಿ ಪೊಲೀಸ್ ಕಮಿಷನರ್ ಲಾಡಾ ಮಾರ್ಟಿನ್ ಮಾರ್ಬಾನಿಯಾಂಗ್ ಆಗಮಿಸಿದ್ದು ಗಂಭೀರ ಗಾಯಗೊಂಡ ಟಿಟಿಇ ಮತ್ತು ಇತರ ಇಬ್ಬರನ್ನು ಬೆಳಗಾವಿಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular