Thursday, July 23, 2026
Homeಕ್ರೈಂಬೆಂಗಳೂರು : 85 ಸಾವಿರ ರೂಪಾಯಿ ವಿಚಾರವಾಗಿ ಇಬ್ಬರು ಸ್ನೇಹಿತರ ನಡುವೆ ಗಲಾಟೆ, ಕೊಲೆಯಲ್ಲಿ ಅಂತ್ಯ.

ಬೆಂಗಳೂರು : 85 ಸಾವಿರ ರೂಪಾಯಿ ವಿಚಾರವಾಗಿ ಇಬ್ಬರು ಸ್ನೇಹಿತರ ನಡುವೆ ಗಲಾಟೆ, ಕೊಲೆಯಲ್ಲಿ ಅಂತ್ಯ.

ಬೆಂಗಳೂರು : ಕಾರ್ಮಿಕರ ನಡುವೆ ಹಣದ ವಿಚಾರದಲ್ಲಿ ಗಲಾಟೆ ನಡೆದು ಇಬ್ಬರು ಪರಸ್ಪರ ಬಡಿದಾಡಿಕೊಂಡು ಹಲ್ಲೆ ಮಾಡಿದ ಪರಿಣಾಮ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ, ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮಹಿಮಾಪುರ ಬಳಿಯಲ್ಲಿರುವ ಶೆಡ್ ಬಳಿ ನಡೆದಿದೆ. ತಮಿಳುನಾಡು ಮೂಲದ 40 ವರ್ಷದ ರಾಜೀವ್ ಗಾಂಧಿ ಪೆರುಮಾಳ್ ಕೊಲೆಯಾದ ವ್ಯಕ್ತಿ, ಇನ್ನೂ ಸಾಕಷ್ಟು ದಿನದಿಂದ ಮಹಿಮಾಪುರ ಬಳಿಯಿರುವ ಶೆಡ್ ನಲ್ಲಿ ಕಲ್ಲು ಕೆಲಸ ಮಾಡುತ್ತಿದ್ದರು. ಇನ್ನೂ ಇಬ್ಬರ ನಡುವೆ ಹಣಕಾಸಿನ ವಿಚಾರದಲ್ಲಿ ಗಲಾಟೆ ನಡೆದಿದೆ, ತೀವ್ರ ರಕ್ತ ಸ್ರಾವದಿಂದ ರಾಜೀವ್ ಗಾಂಧಿ ಪೆರುಮಾಳ್ ನನ್ನು ಆಸ್ಪತ್ರೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಇನ್ನೂ ಆತನ ಸ್ನೇಹಿತ 85 ಸಾವಿರ ರೂಪಾಯಿ ವಿಚಾರವಾಗಿ ಒಂದೇ ರೂಮಿನಲ್ಲಿದ್ದ ಇಬ್ಬರು ಸ್ನೇಹಿತರ ನಡುವೆ ಗಲಾಟೆ ನಡೆದಿದೆ ಎಂದು ತಿಳಿದಿದೆ.

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ಸಿ.ಕೆ.ಬಾಬಾ, ಎಎಸ್ಪಿ ನಾಗೇಶ್, ಡಿವೈಎಸ್ಪಿ ರವಿ, ಪಿಐ ನರೇಂದ್ರ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಸ್ನೇಹಿತ ಕೊಲೆ ಆರೋಪಿಯನ್ನ ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ನೆಲಮಂಗಲ ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular