Thursday, June 25, 2026
Homeರಾಜ್ಯಬೆಂಗಳೂರು : ಶವರ್ಮಾ, ಕಬಾಬ್‌ಗಳಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆ; ಆಹಾರ ಸುರಕ್ಷತಾ ಇಲಾಖೆಯ ದಿಢೀರ್ ದಾಳಿಯಲ್ಲಿ...

ಬೆಂಗಳೂರು : ಶವರ್ಮಾ, ಕಬಾಬ್‌ಗಳಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆ; ಆಹಾರ ಸುರಕ್ಷತಾ ಇಲಾಖೆಯ ದಿಢೀರ್ ದಾಳಿಯಲ್ಲಿ ಆಘಾತಕಾರಿ ಮಾಹಿತಿ.

ಬೆಂಗಳೂರು : ಆಹಾರ ಪ್ರಿಯರ ನೆಚ್ಚಿನ ಖಾದ್ಯಗಳಾದ ಶವರ್ಮಾ ಮತ್ತು ಕಬಾಬ್‌ಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಹಾಗೂ ಕೃತಕ ಬಣ್ಣಗಳ ಅಂಶ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯು ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಸಿದ ದಿಢೀರ್ ತಪಾಸಣೆ ವೇಳೆ ಈ ಮಾಹಿತಿ ಬೆಳಕಿಗೆ ಬಂದಿದೆ.

ಯುವಜನತೆಯಲ್ಲಿ ಜನಪ್ರಿಯವಾಗಿರುವ ಶವರ್ಮಾ ಮತ್ತು ಚಿಕನ್ ಕಬಾಬ್‌ಗಳ ಗುಣಮಟ್ಟ ಪರಿಶೀಲಿಸಲು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ನಗರದ 39 ಪ್ರಮುಖ ಹೋಟೆಲ್‌ಗಳು, ಆಹಾರ ಮಳಿಗೆಗಳು ಹಾಗೂ ರಸ್ತೆಬದಿ ಅಂಗಡಿಗಳಿಂದ ಶವರ್ಮಾ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.

ಒಟ್ಟು 32 ಶವರ್ಮಾ ಮಾದರಿಗಳ ಲ್ಯಾಬ್ ವರದಿ ಲಭ್ಯವಾಗಿದ್ದು, ಅವುಗಳಲ್ಲಿ 24 ಮಾದರಿಗಳು ಮಾತ್ರ ಸುರಕ್ಷಿತ ಎಂದು ದೃಢಪಟ್ಟಿದೆ. ಉಳಿದ 8 ಮಾದರಿಗಳು ಮಾನವ ಆರೋಗ್ಯಕ್ಕೆ ಹಾನಿಕಾರಕವಾಗಿರುವುದಾಗಿ ವರದಿ ತಿಳಿಸಿದೆ.

ಇದರ ಜೊತೆಗೆ ನಗರದ 16 ಕಡೆಗಳಿಂದ ಚಿಕನ್ ಕಬಾಬ್ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಪರೀಕ್ಷಾ ವರದಿ ಪ್ರಕಾರ 14 ಮಾದರಿಗಳು ಸುರಕ್ಷಿತವಾಗಿದ್ದರೆ, 2 ಮಾದರಿಗಳು ಅಸುರಕ್ಷಿತ ಎಂದು ಘೋಷಿಸಲಾಗಿದೆ.

ಅಸುರಕ್ಷಿತ ಆಹಾರ ಮಾರಾಟ ಮಾಡಿರುವ ಹೋಟೆಲ್‌ಗಳು ಹಾಗೂ ಆಹಾರ ಮಳಿಗೆಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ. ನಿಯಮ ಉಲ್ಲಂಘಿಸಿದವರಿಗೆ ಭಾರಿ ದಂಡ ವಿಧಿಸುವುದರ ಜೊತೆಗೆ ಪರವಾನಗಿ ರದ್ದುಪಡಿಸುವ ಕ್ರಮವೂ ಜಾರಿಯಾಗುವ ಸಾಧ್ಯತೆ ಇದೆ.

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಭಾಗಗಳಲ್ಲಿಯೂ ಇಂತಹ ತಪಾಸಣೆಯನ್ನು ವಿಸ್ತರಿಸಲು ಆಹಾರ ಸುರಕ್ಷತಾ ಇಲಾಖೆ ಯೋಜನೆ ರೂಪಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular