ಬೆಂಗಳೂರು : ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಔಷಧ ನಿಯಂತ್ರಣ ಇಲಾಖೆಯನ್ನು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಗೆ ವಿಲೀನಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ ಈ ಮಧ್ಯೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯಲ್ಲಿ ಆಹಾರ
ಸುರಕ್ಷತಾಧಿಕಾರಿಗಳ ಹಾಗೂ ವೈದ್ಯರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯಲ್ಲಿ ಈಗಾಗಲೇ ವೃಂದ ಮತ್ತು ನೇಮಕಾತಿ (ಸಿಆಂಡ್ ಆರ್) ವೈದ್ಯರಿಗೆ ಕಾರ್ಯನಿರ್ವಹಿಸಲು ಅವಕಾಶ ಇಲ್ಲ. ಔಷಧ ನಿಯಂತ್ರಣ ಇಲಾಖೆಯಲ್ಲಿ ನಿಯೋಜನೆ ಮೇರೆಗೆ
ಕಾರ್ಯನಿರ್ವಹಿಸಲು ಅವಕಾಶ ಇರುವುದಿಲ್ಲ.
ಈವರೆಗೆ ಔಷಧ ನಿಯಂತ್ರಣ ಇಲಾಖೆಯಲ್ಲಿ ಯಾವ ಅಧಿಕಾರಿಯೂ ನಿಯೋಜನೆ ಮೇರೆಗೆ ಕೆಲಸ ಮಾಡುತ್ತಿಲ್ಲ. ಆದರೆ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯಲ್ಲಿ ಅಂಕಿತಾಧಿಕಾರಿಗಳ ಹುದ್ದೆಗೆ 30 ವೈದ್ಯರು ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ವೃತ್ತಿಗೆ ಅನುಸಾರವಾದ ಕರ್ತವ್ಯ, ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಹೀಗಾಗಿ, ವಿದ್ಯಾರ್ಹತೆ, ತಜ್ಞತೆ ಮತ್ತು ಕಾರ್ಯ ಸ್ವರೂಪ ಆಧರಿಸಿ ಹಿಂದೆ ವೇತನದಲ್ಲಿ ವಿಶೇಷ ಭತ್ಯೆವನ್ನು ಹಿಂದಿರುಗಿಸಬೇಕು. ಇಲಾಖೆಯಲ್ಲಿ ನಿಯೋಜನೆ
ಮೇರೆಗೆ ಇರುವವರಿಗೂ ಭತ್ಯೆ ಡ್ರಾ ಮಾಡಬಾರದು.
ಅಂಕಿತಾಧಿಕಾರಿಗಳು ಡ್ರಾಯಿಂಗ್ ಆಫೀಸರ್‌ಗಳಾಗಿದ್ದು, ಈ ಬಗ್ಗೆ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಸಂಬAಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೆ ಇಲಾಖೆಯ ಆದೇಶ ಇದೆ. ಆದರೂ, ವೈದ್ಯರು ಅಕ್ರಮವಾಗಿ 3.50 ಕೋಟಿ ರೂ. ವಿಶೇಷ ಭತ್ಯೆ ವಿಥ್? ಡ್ರಾ ಮಾಡಿಕೊಂಡು ನುಂಗಿರುವ ಆರೋಪವಿದೆ. ಆದರೆ, ಈವರೆಗೆ ವೈದ್ಯರು ವಿರುದ್ಧ ಯಾವುದೇ ಕ್ರಮವಾಗಿಲ್ಲ. ರಾಜಕೀಯ ಪ್ರಭಾವ ಬಳಸಿ ಯಾವುದೇ ಕ್ರಮ ಆಗದಂತೆ ಕೆಲ ವೈದ್ಯರು ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಲೆ ಒತ್ತಡ ತಂದಿದ್ದಾರೆ.
ಹಂತಹಂತವಾಗಿ ಅಧಿಸೂಚನೆ: ಇನ್ನೂ, ಆಹಾರ ಕಲಬೆರಕೆ ತಡೆ ಕಾಯ್ದೆ ಅಡಿ ಆಹಾರ ಸುರಕ್ಷತಾಧಿಕಾರಿಗಳು ಆಹಾರ ನಿರೀಕ್ಷಕರಾಗಿ 2000 ರಿಂದ 2008 ರವರೆಗೆ ಹಂತ ಹಂತವಾಗಿ ಸರ್ಕಾರದಿಂದ ಅಧಿಸೂಚನೆಗೊಂಡು
ಕರ್ತವ್ಯ ನಿರ್ವಹಿಸುತ್ತಿದ್ದಾರೆ.
2008 ರಲ್ಲೇ ಹೊರ ರಾಜ್ಯದ ವಿಶ್ವವಿದ್ಯಾನಿಲಯ (ಜನಾರ್ಧನ್ ರಾಯ್ ನಗರ್ ರಾಜಸ್ತಾನ್ ವಿದ್ಯಾಪೀಠ ಯೂನಿವರ್ಸಿಟಿ ಜೆಎನ್‌ಆರ್‌ವಿ) ಅಂಕಪಟ್ಟಿ ಹಾಗೂ ವಿಜ್ಞಾನ ವಿಷಯವಲ್ಲದ ಸಂಬಂಧಪಟ್ಟಂತೆ ಆಹಾರ ನಿರೀಕ್ಷಕರ ವಿರುದ್ಧ ದೂರು ದಾಖಲಾಗಿತ್ತು.
ದೂರಿನ ಕುರಿತು ತನಿಖೆ ನಡೆಸಿದ್ದ ಇಲಾಖೆಯ ಜಾಗೃತಾ ಕೋಶ ಹಾಗೂ ಸರ್ಕಾರದ ಅಧೀನದ ಕಾರ್ಯದರ್ಶಿ ಇದು ಸುಳ್ಳು ದೂರು ಎಂದು ದೃಢಪಡಿಸಿದ್ದಾರೆ. ಅಲ್ಲದೆ, 2022 ರ ಅ.29ರಂದು ಇಲಾಖೆ ನಡೆಸಿದ್ದ ತನಿಖೆಯಲ್ಲಿ ಆಹಾರ ನಿರೀಕ್ಷಕರು ಹೊಂದಿರುವ ಪ್ರಮಾಣ ಪತ್ರ ನೈಜತೆಯಿಂದ ಕೂಡಿದೆ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ವರದಿ ಕೊಟ್ಟಿದೆ.
ಆದರೂ ಆಹಾರ ಸುರಕ್ಷಾಧಿಕಾರಿಗಳಿಗೆ ಇದುವರೆಗೆ ಹುದ್ದೆಯ ಅನುಗುಣಕ್ಕೆ ತಕ್ಕಂತೆ ವೇತನ ಹೆಚ್ಚಳ, ಬಡ್ತಿ ಸೇರಿ ಇತರೆ ಆಡಳಿತಾತ್ಮಕ ಸೌಲಭ್ಯ ಸಿಕ್ಕಿಲ್ಲ. 2013 ರಲ್ಲಿ ಕಾರ್ಯಕಾರಿ ಆದೇಶ ಅನ್ವಯ ಹಿರಿಯ/ಆಹಾರ ಸುರಕ್ಷತಾ
ಅಧಿಕಾರಿಗಳಾಗಿ ನೇಮಕಾತಿ ಮಾಡಿದ್ದಾರೆ ಮತ್ತು ಇವರು ಹೊರತುಪಡಿಸಿ ಆರೋಗ್ಯ ಇಲಾಖೆಯಿಂದ ನಿಯೋಜನೆ ಮೇರೆಗೆ ಸುಮಾರು 80 ಕಿರಿಯ/ ಹಿರಿಯ ಅರೋಗ್ಯ ಸಹಾಯಕರು ಕೂಡ ದೂರ ಶಿಕ್ಷಣದ ಮೇಲೆ ಪದವಿ
ಪಡೆ ದಿದ್ದಾರೆ. ಇವರುಗಳು ಇಲ್ಲಿ ನಿಯೋಜನೆ ಮೇರೆಗೆ ಆರೋಗ್ಯ ಇಲಾಖೆಯಿಂದ ಬಂದಿರುತ್ತಾರೆ.
ಆದ್ದರಿAದ, ನಿಯೋಜನೆ ಬಂದ ವೈದ್ಯರು, ಕಾರ್ಯಕಾರಿ ಆದೇಶದಲ್ಲಿ ಹಾಗೂ ವೃಂದ ಮತ್ತು ನೇಮಕಾತಿ ನಿಯಮದಂತೆ ಕಾರ್ಯನಿರ್ವಹಿಸುತ್ತಿರುವವರಿಗೆ ಮಾತ್ರ ಅನಗತ್ಯವಾಗಿ ತೊಂದರೆ ಕೊಡುತ್ತಿದ್ದಾರೆ. ವೃಂದ ಮತ್ತು ನೇಮಕಾತಿ ನಿಯಮದ ಅನ್ವಯ ಇಲಾಖೆಯ ಉಪ ಆಯುಕ್ತರ ಹುದ್ದೆಯು ಹಿರಿಯ ಕೆಎಎಸ್ ಶ್ರೇಣಿಯ ಹುದ್ದೆಗಳಾಗಿವೆ ಹಾಗೂ ಅಂಕಿತಾಧಿಕಾರಿಗಳ ಹುದ್ದೆಯೂ ಸಹ ಶೇ.50 ಪದೋನ್ನತಿ, ಉಳಿದ ಶೇ. 50 ರಷ್ಟು ನೇರ ನೇಮಕಾತಿ ಹುದ್ದೆಗಳಾಗಿವೆ. ಇಲಾಖೆಗೆ ಹೊಸದಾಗಿ ಪ್ರಧಾನ ಕಾರ್ಯದರ್ಶಿ, ಆಯುಕ್ತರು ಬಂದಾಗ ವೈದ್ಯರು, ೩೦ ಆಹಾರ ಸುರಕ್ಷತಾಧಿಕಾರಿಗಳ ಅಂಕಪಟ್ಟಿ ಮತ್ತು ಇತರೆ ದೂರುಗಳಿವೆ ಎಂದು ಅಗಾಗ್ಗೆ ದೂರು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ.