Sunday, September 20, 2026
Homeರಾಜ್ಯಬೆಂಗಳೂರು ; ಪತಿಗೆ ಕಿರುಕುಳ ನೀಡಿ ತನ್ನೊಂದಿಗೆ ಸಂಸಾರ ಮಾಡಲು ದಿನಕ್ಕೆ 5 ಸಾವಿರ ರೂ...

ಬೆಂಗಳೂರು ; ಪತಿಗೆ ಕಿರುಕುಳ ನೀಡಿ ತನ್ನೊಂದಿಗೆ ಸಂಸಾರ ಮಾಡಲು ದಿನಕ್ಕೆ 5 ಸಾವಿರ ರೂ ಬೇಡಿಕೆ ಇಟ್ಟ ಪತ್ನಿ.!

ಬೆಂಗಳೂರು : ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಮದುವೆಯಾದ ಯುವತಿಯೊಬ್ಬಳು ಪತಿಗೆ ಕಿರುಕುಳ ನೀಡಿ ತನ್ನೊಂದಿಗೆ ಸಂಸಾರ ಮಾಡಲು ದಿನಕ್ಕೆ 5 ಸಾವಿರ ರೂ.ಗಳ ಬೇಡಿಕೆ ಇಟ್ಟಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

2022ರಲ್ಲಿ ಮದುವೆಯಾದ ಈ ಯುವತಿ ತನ್ನ ಪತಿಯೊಂದಿಗೆ ಒಂದು ದಿನವೂ ಸರಿಯಾಗಿ ಸಂಸಾರ ಮಾಡಿ ಲ್ಲವಂತೆ. ನಮಗೆ ಈಗಲೇ ಮಕ್ಕಳು ಬೇಡ ನನ್ನ ಸೌಂದರ್ಯ ಹಾಳಾಗುತ್ತೆ, 60 ವರ್ಷದ ಬಳಿಕ ಮಕ್ಕಳು ಮಾಡಿ ಕೊಳ್ಳೋಣ, ಹಾಗೊಂದು ವೇಳೆ ಮಕ್ಕಳು ಬೇಕೆಂದರೆ ದತ್ತು ಪಡೆಯೋಣವೆಂದು ಹೇಳುತ್ತಿರುವುದು ಟೆಕ್ಕಿಗೆ ಒಂದು ರೀತಿ ಇರಿಸು ಮುರುಸಾಗಿದೆ.

ದುಡಿದ ಹಣವೆಲ್ಲವನ್ನೂ ಪತ್ನಿ ಖರ್ಚು ಮಾಡಿದ್ದಾಳೆ. ಒಂದು ವೇಳೆ ಪತ್ನಿ ಸಮೀಪ ಹೋದರೆ ಡೆತ್ ನೋಟ್ ಬರೆದಿಟ್ಟು ಆತಹತ್ಯೆ ಮಾಡಿ ಕೊಳ್ಳುವುದಾಗಿ ಪತಿಗೆ ಬೆದರಿಕೆ ಹಾಕಿ ದ್ದಾಳಂತೆ.ಅಲ್ಲದೇ ಡಿವೋರ್ಸ್ ನೀಡಲು 45ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾಳೆ.

ಪತ್ನಿಯ ವರ್ತನೆಯಿಂದ ನೊಂದ ಬೆಕ್ಕಿ ಪತ್ನಿ ಹಾಗೂ ಆಕೆಯ ಕುಟುಂಬದ ವರ ವಿರುದ್ಧ ವೈಯಾಲಿ ಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿ ದ್ದರು. ಪೊಲೀಸರು ಎನ್‌ಸಿ ಆರ್ ದಾಖಲಿಸಿ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular