Tuesday, July 21, 2026
Homeಜಿಲ್ಲೆಮಂಗಳೂರು : ಗೂಗಲ್ ನಲ್ಲಿ ಸಿಂಗಲ್ ರೇಟಿಂಗ್ ಕೊಟ್ಟಿದ್ದಕ್ಕೆ ಇಂಜಿನಿಯರಿಂಗ್ ವಿಧ್ಯಾರ್ಥಿಗೆ ಪಿ.ಜಿ ಮಾಲಿಕನಿಂದ ಹಿಗ್ಗಾಮುಗ್ಗಾ...

ಮಂಗಳೂರು : ಗೂಗಲ್ ನಲ್ಲಿ ಸಿಂಗಲ್ ರೇಟಿಂಗ್ ಕೊಟ್ಟಿದ್ದಕ್ಕೆ ಇಂಜಿನಿಯರಿಂಗ್ ವಿಧ್ಯಾರ್ಥಿಗೆ ಪಿ.ಜಿ ಮಾಲಿಕನಿಂದ ಹಿಗ್ಗಾಮುಗ್ಗಾ ಥಳಿತ…!

ಮಂಗಳೂರು ; ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಪಿ.ಜಿ ಮಾಲಿಕ ಜೊತೆ ಐದು ಮಂದಿ ಸೇರಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಂಗಳೂರಿನ ಕದ್ರಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಥಳಿತಕ್ಕೊಳಗಾದ ವಿಧ್ಯಾರ್ಥಿಯನ್ನು ಕಲಬುರಗಿ ಮೂಲದ ವಿಕಾಸ್ (18) ಎಂದು ತಿಳಿದಿದೆ.

ಮಾರ್ಚ್ 17 ರ ರಾತ್ರಿ 10.30 ರ ವೇಳೆಗೆ ಈ ಘಟನೆ ನಡೆದಿದ್ದು ಕದ್ರಿಯಲ್ಲಿರೋ ಬಾಯ್ಸ್ ಪಿ.ಜಿ ಮಾಲೀಕರಿಂದ ಹಲ್ಲೆ ನಡೆದಿದೆ. ಕಳೆದ ಆರು ತಿಂಗಳಿಂದ ಪಿ‌.ಜಿ ಯಲ್ಲಿದ್ದ ವಿಕಾಸ್ ಈಗ ಬೇರೆ ರೂಂ ಮಾಡಿಕೊಂಡಿದ್ದಾನೆ. ಪಿ.ಜಿ ಯಲ್ಲಿ ಊಟದಲ್ಲಿ ಹುಳ, ಭಾರೀ ಗಲೀಜು, ಅತೀ ಕೆಟ್ಟ ಶೌಚಾಲಯ ಅಂತಾ ವಿದ್ಯಾರ್ಥಿ ಆರೋಪಿಸಿದ್ದನು. ಈ ಬಗ್ಗೆ ಗೂಗಲ್ ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟು ಕಾಮೆಂಟ್ ಮಾಡಿದ್ದನು. ಕಾಮೆಂಟ್ ಮಾಡಿದ್ದ ವಿಕಾಸ್ ಗೆ ಪಿ.ಜಿ ಮಾಲೀಕ ಸಂತೋಷ್ ಧಮಕಿಹಾಕಿದ್ದು ಡಿಲೀಟ್ ಮಾಡುವಂತೆ ಬೆದರಿಕೆ ಹಾಕಿದ್ದಾನೆ

ಡಿಲೀಟ್ ಮಾಡದೇ ಇದ್ದಾಗ ಐದು ಜನರ ತಂಡ ಜೊತೆ ಬಂದು ಹಲ್ಲೆ ಮಾಡಿ ಡಿಲೀಟ್ ಮಾಡಿಸಿದ್ದಾನೆಂದು ಕದ್ರಿ ಪೊಲೀಸ್ ಠಾಣೆಗೆ ವಿಕಾಸ್ ದೂರು ‌ನೀಡಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

Most Popular