ಬೆಂಗಳೂರು : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಇಂದು ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟಿçಕ್ ಕಾರ್ ಅನ್ನು ಬಿಡುಗಡೆ ಮಾಡಿದೆ.
“ಸೆಡಾನ್ ಟು ದಿ ಕೋರ್” ಎಂಬ ಪರಿಕಲ್ಪನೆಯ ಆಧಾರದಲ್ಲಿ ಈ ಹೊಚ್ಚ ಹೊಸ ಎಲೆಕ್ಟಿçಕ್ ಸೆಡಾನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಪರಿಸರ ಸ್ನೇಹಿ ಎಲೆಕ್ಟಿçಕ್ ಕಾರ್ ಕ್ಯಾಮಿ ಅತ್ಯುತ್ತಮ ಕಾರ್ಯಕ್ಷಮತೆ,ಆಕರ್ಷಕ ಶೈಲಿ, ಉನ್ನತ ಸುರಕ್ಷತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಮ್ಮಿಲನವಾಗಿದೆ. ಈ ಕಾಲದ ಗ್ರಾಹಕರ ಆಸೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿರುವ ಅದ್ದೂರಿ ಐಷಾರಾಮಿ ಸೆಡಾನ್ ಆಗಿದೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮಸಕಾಜು ಯೋಶಿಮುರಾ ಅವರು, “ಟೊಯೋಟಾದ ಜಾಗತಿಕ ಪರಿಸರ ಸವಾಲು ೨೦೫೦ಕ್ಕೆ ಅನುಗುಣವಾಗಿ ಅತ್ಯುತ್ತಮವಾದ, ಸುಸ್ಥಿರ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ನಮ್ಮ ಅಭಿವೃದ್ಧಿ ದೃಷ್ಟಿಕೋನಕ್ಕೆ ಈಗ ಬಿಡುಗಡೆಯಾಗಿರುವ ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟಿçಕ್ ಕಾರ್ ಉತ್ತಮ ಪುರಾವೆಯಾಗಿದೆ.
ಭಾರತವು ಬಹಳ ಮುಖ್ಯ ಮಾರುಕಟ್ಟೆಯಾಗಿದ್ದು, ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವ ಮತ್ತು ಇಂಧನ ಭದ್ರತೆ ಸಾಧಿಸುವ ಭಾರತದ ಗುರಿಗಳಿಗೆ ಪೂರಕವಾದ ಉತ್ಪನ್ನ ಕಾರ್ಯತಂತ್ರವನ್ನು ನಾವು
ಹೊಂದಿದ್ದೇವೆ. ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟಿçಕ್ ಕಾರ್ ಹಸಿರು ಸಾರಿಗೆ ವಿಭಾಗಕ್ಕೆ ನಮ್ಮ ಕೊಡುಗೆಯಾಗಿದ್ದು, ಭವಿಷ್ಯದ ಇಂಗಾಲ ಮುಕ್ತ, ಸಂತೋಷಕರ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ
ನಮ್ಮ ಮಹತ್ವದ ಕೊಡುಗೆಯಾಗಿದೆ” ಎಂದು ಹೇಳಿದರು.