Thursday, July 23, 2026
Homeಜಿಲ್ಲೆಬಂಟ್ವಾಳ : ನೇತ್ರಾವತಿ ನದಿಯಲ್ಲಿ ಇಬ್ಬರು ಬಾಲಕಿಯರು ನೀರುಪಾಲು.

ಬಂಟ್ವಾಳ : ನೇತ್ರಾವತಿ ನದಿಯಲ್ಲಿ ಇಬ್ಬರು ಬಾಲಕಿಯರು ನೀರುಪಾಲು.

ಬಂಟ್ವಾಳ : ನಾವೂರಿನ ನೇತ್ರಾವತಿ ನದಿಯಲ್ಲಿ ಭಾನುವಾರ ಸಂಜೆ ಇಬ್ಬರು ಬಾಲಕಿಯರು ಮುಳುಗಿ ಸಾವನ್ನಪ್ಪಿದ್ದಾರೆ.

ಅನ್ಸಾರ್ ಅವರ ಪುತ್ರಿ ಅಶ್ರಾ (11) ಮತ್ತು ಇಲ್ಯಾಸ್ ಅವರ ಪುತ್ರಿ ಮರಿಯಮ್ ನಶಿಯಾ (14) ಮೃತಪಟ್ಟವರು. ಭಾನುವಾರ ನವೂರಿನ ಸಂಬಂಧಿಕರ ಮನೆಗೆ ಇಲ್ಯಾಸ್ ಬಂದಿದ್ದು, ಕುಟುಂಬ ಸದಸ್ಯರು ನದಿ ದಡದಲ್ಲಿ ಕುಳಿತಿದ್ದರು. ಮಕ್ಕಳು ಖುಷಿಪಡುತ್ತಿದ್ದಾಗ ಇದ್ದಕ್ಕಿದ್ದಂತೆ ಇಬ್ಬರು ಹುಡುಗಿಯರು ಕೊಚ್ಚಿಕೊಂಡು ಹೋಗಿದ್ದಾರೆ .

ಕುಟುಂಬದ ಸದಸ್ಯರಲ್ಲಿ ಯಾರಿಗೂ ಈಜು ಗೊತ್ತಿಲ್ಲದ ಕಾರಣ ಬಾಲಕಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular