ಬಂಟ್ವಾಳ : ಪತ್ನಿ ಹಾಗೂ ಕುಟುಂಬಸ್ಥರು ಅತಿಯಾಗಿ ಮೊಬೈಲ್ ಬಳಸದಂತೆ ಸಲಹೆ ನೀಡಿದ್ದರಿಂದ ಖಿನ್ನತೆಗೆ ಒಳಗಾದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಚಿನಡ್ಕ ನಯನಾಡು ಎಂಬಲ್ಲಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಹರಿಪ್ರಸಾದ್ ಅವರ ಪತ್ನಿ ಜಯಲಕ್ಷ್ಮಿ ದೇವಾಡಿಗ (35) ಎಂದು ಗುರುತಿಸಲಾಗಿದೆ. ಮದುವೆಯಾಗಿ 15 ವರ್ಷಗಳಾಗಿದ್ದು, ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ.
ಪತ್ನಿ ಮೊಬೈಲ್ ಮಾತನಾಡುವುದರಲ್ಲಿ ಮತ್ತು ಮೆಸೇಜ್ ಮಾಡುವುದರಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿರುವುದನ್ನು ಗಮನಿಸಿದ ಹರಿಪ್ರಸಾದ್, ಆಕೆಗೆ ಈ ಅಭ್ಯಾಸದ ವಿರುದ್ಧ ಸಲಹೆ ನೀಡಿದರು. ಹರಿಪ್ರಸಾದ್ ಸಲಹೆಯಿಂದ ಜಯಲಕ್ಷ್ಮಿ ಖಿನ್ನತೆಗೆ ಒಳಗಾದ ಕಾರಣ, ಆಕೆಯ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪತಿ ನೀಡುವ ಉತ್ತಮ ಸಲಹೆಯನ್ನು ಪಾಲಿಸುವಂತೆ ಜಯಲಕ್ಷ್ಮಿ ಅವರಿಗೆ ಸಲಹೆ ನೀಡಿದರು.
ಆದರೆ, ಬುಧವಾರ ಸಂಜೆ ಪತಿ ಮಾರುಕಟ್ಟೆಗೆ ತೆರಳಿದ್ದ ವೇಳೆ ಜಯಲಕ್ಷ್ಮಿ ಮನೆಯ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.