ಉಳ್ಳಾಲ: ಸುರತ್ಕಲ್ನ ಫಾಝಿಲ್ ಹತ್ಯೆ ಆರೋಪಿ ಹರ್ಷಿತ್ ಎಂಬಾತ ವ್ಯಕ್ತಿಯೋರ್ವರಲ್ಲಿ ಹಫ್ತಾಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆಯೊಡ್ಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರು ಬಳಿ ನಡೆದಿದ್ದು,ಈ ಬಗ್ಗೆ ಉದಯಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಹರ್ಷಿತ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫಾಝಿಲ್ ಕೊಲೆ ಆರೋಪಿ ಹರ್ಷಿತ್ ಫೆ.2ರಂದು ಮಾಡೂರು ನಿವಾಸಿ ಬಸ್ ನಿರ್ವಾಹಕ ವೃತ್ತಿ ಮಾಡುತ್ತಿದ್ದ ಉದಯ್ ಕುಮಾರ್ ಸಾವೂರಿಗೆ ಕರೆ ಮಾಡಿ ನಾನು ಪಾಝಿಲ್ ಕೊಲೆ ಆರೋಪಿ ಆಗಿದ್ದು , ಈಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದೇನೆ.ನನಗೆ ಧನ ಸಹಾಯ ನೀಡಬೇಕು ಎಂದು ಕೇಳಿದ್ದ ಎನ್ನಲಾಗಿದೆ.ಇದಕ್ಕೆ ಉದಯ್ ಕುಮಾರ್ ನಿರಾಕರಿಸಿದ್ದರಂತೆ.ಇದರ ಬಳಿಕ ಫೆ.6 ರಂದು ಹರ್ಷಿತ್ ಉದಯ್ ಗೆ ಮತ್ತೊಮ್ಮೆ ಕರೆ ಮಾಡಿ ನನಗೆ ಮತ್ತು ಜೈಲಿನಲ್ಲಿ ಇರುವವರಿಗೆ ಧನ ಸಹಾಯ ನೀಡಬೇಕು ಎಂದು ಕೇಳಿದ್ದ ಎನ್ನಲಾಗಿದೆ.ಇದಕ್ಕೆ ಉದಯ್ ರವರು ಒಪ್ಪದ ಕಾರಣ ಹರ್ಷಿತ್ ಜೀವ ಬೆದರಿಕೆ ಒಡ್ಡಿದ್ದಾನೆ.ಈ ಬಗ್ಗೆ ಉದಯ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.