ಪುತ್ತೂರು : ಪುತ್ತೂರಿನಲ್ಲಿ ಮತ್ತೊಮ್ಮೆ ತಲೆ ಉರುಳಿಸಲು ಪ್ಲ್ಯಾನ್ ಮಾಡಲಾಗಿದ್ದು ಮೃತ ಅಕ್ಷಯ್ ಕಲ್ಲೇಗ ಮರ್ಡರ್ ಪ್ರತಿಕಾರಕ್ಕೆ ಹುನ್ನಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಪುತ್ತೂರಿನಲ್ಲಿ ನಡೆಯಲಿದ್ದ ಕೃತ್ಯವನ್ನ ತಡೆಹಿಡಿಯುದರಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ಷಯ್ ಕಲ್ಲೇಗ ಕೊಲೆ ಆರೋಪಿ ಮನೀಶ್ ಸಹೋದರ ಮನೋಜ್ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದು ಈ ಬಗ್ಗೆ ಬೆದರಿಕೆ ಬಂದ ಹಿನ್ನೆಲೆ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು.
ಕಳೆದ ಹಲವು ದಿನಗಳ ಹಿಂದೆ ನಿನ್ನ ತಮ್ಮ ಮನೀಶ್ ಹಾಗೂ ಉಳಿದ ಆರೋಪಿಗಳು ಜೈಲಿನಿದ್ದಾರೆ ಆದ್ರೆ ನಿನ್ನನ್ನ ಬಿಡಲ್ಲ ಎಂದು ಫೋನ್ ಕರೆ ಮಾಡಿ ಆರೋಪಿ ಮನೀಶ್ ಸಹೋದರ ಮನೋಜ್ ಗೆ ಬೆದರಿಕೆ ಹಾಕಿದ್ದರು. ಪುತ್ತೂರಿನ ಮುಕ್ರಂಪಾಡಿಯಲ್ಲಿ ಅವಿತುಕೊಂಡಿದ್ದ ದುಷ್ಕರ್ಮಿಗಳ ತಂಡ ಮನೋಜ್ ನ ಚಲನವಲನವನ್ನ ಗಮನಿಸುತ್ತಿದ್ದರು.ಅಲರ್ಟ್ ಆಗಿದ್ದ ಮನೋಜ್ ಪೊಲೀಸರಿಗೆ ದೂರು ನೀಡಿದ್ದನು.
ಫೆ.19ರಂದು ಪುತ್ತೂರು ಪೇಟೆ ಪೊಲೀಸ್ ನಿರೀಕ್ಷಕ ಸತೀಶ್ ಜಿ.ಜೆ ಠಾಣೆಯ ಸಿಬ್ಬಂದಿಗಳೊಂದಿಗೆ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಜಂಕ್ಷನ್ ಬಳಿ ಕಾರಿನಲ್ಲಿ ಅವಿತ್ತಿದ್ದ ನಾಲ್ವರು ದುಷ್ಕರ್ಮಿಗಳ ತಂಡವನ್ನು ಬಂಧಿಸಿದ್ದರು ಈ ಬಗ್ಗೆ ತನಿಖೆ ವೇಳೆ ಅಕ್ಷಯ್ ಕಲ್ಲೇಗ ಮರ್ಡರ್ ಗೆ ರಿವೇಂಜ್ ಗಾಗಿ ಮನೋಜ್ ಗೆ ಸ್ಕೆಚ್ ಎಂದು ಬಾಯಿಬಿಟ್ಟಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಟ್ವಾಳ ನಿವಾಸಿ ಕಿಶೋರ್ ಕಲ್ಲಡ್ಕ (36), ಪುತ್ತೂರಿನ ಮನೋಜ್ (23), ಆಶಿಕ್ (28), ಸನತ್ ಕುಮಾರ್ (24) ಎಂದು ತಿಳಿದುಬಂದಿದೆ,ಸದ್ಯ ಕಾರು, ತಲ್ವಾರ್ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ಆರ್ಮ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಿದ್ದಾರೆ.


