Friday, August 7, 2026
Homeಗ್ಯಾಜೆಟ್ / ಟೆಕ್ನವದೆಹಲಿ : 2028ರಿಂದ ಹೊಸ ವಾಹನಗಳಿಗೆ V2V ಕಡ್ಡಾಯ; ಅಪಘಾತ ತಡೆಗೆ ಕೇಂದ್ರದ ಮಹತ್ವದ ಕ್ರಮ.

ನವದೆಹಲಿ : 2028ರಿಂದ ಹೊಸ ವಾಹನಗಳಿಗೆ V2V ಕಡ್ಡಾಯ; ಅಪಘಾತ ತಡೆಗೆ ಕೇಂದ್ರದ ಮಹತ್ವದ ಕ್ರಮ.

ನವದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಮಹತ್ವದ ಕರಡು ಅಧಿಸೂಚನೆ ಹೊರಡಿಸಿದೆ.

ಅದರಂತೆ, 2028ರ ಅಕ್ಟೋಬರ್ 1ರಿಂದ ಉತ್ಪಾದನೆಯಾಗುವ ಎಲ್, ಎಂ ಹಾಗೂ ಎನ್ ವರ್ಗದ ಎಲ್ಲಾ ಹೊಸ ವಾಹನಗಳಲ್ಲಿ Vehicle-to-Vehicle (V2V) ಸಂವಹನ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಪ್ರಸ್ತಾಪಿಸಲಾಗಿದೆ. ಈ ವ್ಯವಸ್ಥೆಯಿಂದ ವಾಹನಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡು ಅಪಘಾತಗಳ ಸಾಧ್ಯತೆಯನ್ನು ಮುಂಚಿತವಾಗಿಯೇ ಎಚ್ಚರಿಸಲಿದೆ.

V2V ತಂತ್ರಜ್ಞಾನದ ಪ್ರಮುಖ ಪ್ರಯೋಜನಗಳು:

ವಾಹನಗಳ ಸ್ಥಳ, ವೇಗ, ದಿಕ್ಕು ಹಾಗೂ ಲೇನ್ ಬದಲಾವಣೆ ಮಾಹಿತಿ ಪರಸ್ಪರ ವಿನಿಮಯ.

ಮುಂದೆ ಸಾಗುವ ವಾಹನ ಹಠಾತ್ ಬ್ರೇಕ್ ಹಾಕಿದರೆ ಹಿಂದಿನ ವಾಹನಕ್ಕೆ ತಕ್ಷಣ ಎಚ್ಚರಿಕೆ.

ಡಿಕ್ಕಿ ಸಂಭವಿಸುವ ಸಾಧ್ಯತೆ ಇದ್ದರೆ ಚಾಲಕನಿಗೆ ಮುನ್ನೆಚ್ಚರಿಕೆ ಸಂದೇಶ.

ಅಸುರಕ್ಷಿತ ಲೇನ್ ಬದಲಾವಣೆ ಮತ್ತು ತುರ್ತು ಪರಿಸ್ಥಿತಿಗಳ ಬಗ್ಗೆ ಕ್ಷಣಾರ್ಧದಲ್ಲಿ ಮಾಹಿತಿ.

ರಸ್ತೆ ಸುರಕ್ಷತೆ ಹೆಚ್ಚಿಸಿ ಅಪಘಾತಗಳ ಪ್ರಮಾಣ ಕಡಿಮೆ ಮಾಡುವ ಗುರಿ.

ಚೀನಾ, ಜಪಾನ್, ಅಮೆರಿಕ ಹಾಗೂ ಹಲವು ಯುರೋಪಿನ ರಾಷ್ಟ್ರಗಳಲ್ಲಿ ಈ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ.

ಇದು ಕರಡು ಅಧಿಸೂಚನೆಯಾಗಿದ್ದು, ಅಂತಿಮ ಅನುಮೋದನೆಯ ಬಳಿಕ ಜಾರಿಗೆ ಬರಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular