Saturday, October 31, 2026
Homeಗ್ಯಾಜೆಟ್ / ಟೆಕ್ನವದೆಹಲಿ : ₹40,000 ಕೋಟಿ ವೆಚ್ಚದಲ್ಲಿ ನೌಕಾಪಡೆಗೆ 8 ಅದೃಶ್ಯ ಯುದ್ಧನೌಕೆ, ನಿರ್ಮಾಣಕ್ಕೆ ಮೋದಿ ಸರ್ಕಾರದ...

ನವದೆಹಲಿ : ₹40,000 ಕೋಟಿ ವೆಚ್ಚದಲ್ಲಿ ನೌಕಾಪಡೆಗೆ 8 ಅದೃಶ್ಯ ಯುದ್ಧನೌಕೆ, ನಿರ್ಮಾಣಕ್ಕೆ ಮೋದಿ ಸರ್ಕಾರದ ಗ್ರೀನ್ ಸಿಗ್ನಲ್..!

ನವದೆಹಲಿ : ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ವ್ಯವಹಾರಗಳ ಸಂಪುಟ ಸಮಿತಿ (CCS) ಸಭೆಯಲ್ಲಿ ₹40,000 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಬೃಹತ್ ರಕ್ಷಣಾ ಯೋಜನೆಗೆ ಹಸಿರು ನಿಶಾನೆ ದೊರೆತಿದೆ.

ಈ ಯೋಜನೆಯಡಿ ಭಾರತೀಯ ನೌಕಾಪಡೆಗಾಗಿ 8 ಅತ್ಯಾಧುನಿಕ ಮುಂದಿನ ಪೀಳಿಗೆಯ ಸ್ಟೆಲ್ತ್ (ಅದೃಶ್ಯ) ಯುದ್ಧನೌಕೆಗಳನ್ನು ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ.

2030ರ ವೇಳೆಗೆ ಮೊದಲ ನೌಕೆ ಸೇರ್ಪಡೆ

ಯೋಜನೆಯಡಿ ನಿರ್ಮಾಣವಾಗಲಿರುವ ಮೊದಲ ಅತ್ಯಾಧುನಿಕ ಯುದ್ಧನೌಕೆ 2030ರ ವೇಳೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ನಿಗದಿತ ಅವಧಿಗೂ ಮುನ್ನವೇ ನೌಕೆಗಳನ್ನು ಹಸ್ತಾಂತರಿಸುವ ನಿಟ್ಟಿನಲ್ಲಿ ನಿರ್ಮಾಣ ಸಂಸ್ಥೆಗಳು ಯೋಜನೆ ರೂಪಿಸುತ್ತಿವೆ.

ಯೋಜನೆಯಡಿ ನಿರ್ಮಾಣವಾಗಲಿರುವ ಮೊದಲ ಅತ್ಯಾಧುನಿಕ ಯುದ್ಧನೌಕೆ 2030ರ ವೇಳೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ನಿಗದಿತ ಅವಧಿಗೂ ಮುನ್ನವೇ ನೌಕೆಗಳನ್ನು ಹಸ್ತಾಂತರಿಸುವ ನಿಟ್ಟಿನಲ್ಲಿ ನಿರ್ಮಾಣ ಸಂಸ್ಥೆಗಳು ಯೋಜನೆ ರೂಪಿಸುತ್ತಿವೆ.

ಎರಡು ಸರ್ಕಾರಿ ಸಂಸ್ಥೆಗಳಿಗೆ ನಿರ್ಮಾಣದ ಹೊಣೆ.

8 ಯುದ್ಧನೌಕೆಗಳ ನಿರ್ಮಾಣದ ಜವಾಬ್ದಾರಿಯನ್ನು ಭಾರತದ ಎರಡು ಪ್ರಮುಖ ಸಾರ್ವಜನಿಕ ವಲಯದ ಹಡಗು ನಿರ್ಮಾಣ ಸಂಸ್ಥೆಗಳಿಗೆ ವಹಿಸಲಾಗಿದೆ.

ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್ (GRSE).

ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ (GSL).

ಹೇಗಿರಲಿವೆ ಈ ಅದೃಶ್ಯ ಯುದ್ಧನೌಕೆಗಳು?

ಕರಾವಳಿ ರಕ್ಷಣೆ, ಕಣ್ಗಾವಲು ಹಾಗೂ ಯುದ್ಧ ಕಾರ್ಯಾಚರಣೆಗಳಿಗೆ ಬಳಕೆ.

ಸುಮಾರು 2,000 ಟನ್ ತೂಕದ ಸಾಮರ್ಥ್ಯ.

ಗಂಟೆಗೆ 30 ನಾಟ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ.

ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳ ಅಳವಡಿಕೆ.

ರಾಡಾರ್‌ಗಳಿಗೆ ಸಿಗುವ ಸಾಧ್ಯತೆಯನ್ನು ಕಡಿಮೆ ಮಾಡುವ ಸ್ಟೆಲ್ತ್ ತಂತ್ರಜ್ಞಾನ.

ಶೇ.70ಕ್ಕೂ ಹೆಚ್ಚು ದೇಶೀಯ ಉಪಕರಣಗಳ ಬಳಕೆ
ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಅಭಿಯಾನದಡಿ ಈ ಯುದ್ಧನೌಕೆಗಳನ್ನು ನಿರ್ಮಿಸಲಾಗುತ್ತಿದೆ.

ಶೇ.70ಕ್ಕೂ ಹೆಚ್ಚು ಸ್ಥಳೀಯವಾಗಿ ತಯಾರಿಸಲಾದ ಬಿಡಿಭಾಗಗಳು ಮತ್ತು ಉಪಕರಣಗಳನ್ನು ಬಳಸುವ ಗುರಿ ಹೊಂದಲಾಗಿದೆ.

ಈ ಯೋಜನೆಯಿಂದ ಭಾರತದ ರಕ್ಷಣಾ ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ದೊರೆಯುವುದರ ಜತೆಗೆ, ದೇಶೀಯ ಹಡಗು ನಿರ್ಮಾಣ ಸಾಮರ್ಥ್ಯವೂ ಮತ್ತಷ್ಟು ವೃದ್ಧಿಯಾಗುವ ನಿರೀಕ್ಷೆಯಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular