Sunday, May 17, 2026
Flats for sale
Homeದೇಶನವದೆಹಲಿ : ಮೊದಲ ಬಾರಿಗೆ ದೇಶದಲ್ಲಿ ‘ಕ್ಯಾಪ್ಟಗನ್’ ಜಪ್ತಿ,ಐಸಿಸ್ ಉಗ್ರರು ಬಳಸುವ ‘ಜಿಹಾದಿ ಡ್ರಗ್’ ಗುಜರಾತ್...

ನವದೆಹಲಿ : ಮೊದಲ ಬಾರಿಗೆ ದೇಶದಲ್ಲಿ ‘ಕ್ಯಾಪ್ಟಗನ್’ ಜಪ್ತಿ,ಐಸಿಸ್ ಉಗ್ರರು ಬಳಸುವ ‘ಜಿಹಾದಿ ಡ್ರಗ್’ ಗುಜರಾತ್ ಬಂದರಲ್ಲಿ ವಶ.

ನವದೆಹಲಿ : ಡ್ರಗ್ ಮುಕ್ತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಭದ್ರತಾ ಸಂಸ್ಥೆಗಳು ಶನಿವಾರ ಮಹತ್ವದ ಯಶಸ್ಸು ಸಾಧಿಸಿವೆ. ‘ಆಪರೇಷನ್ ರೇಜ್‌ಪಿಲ್’ ಅಡಿಯಲ್ಲಿ ಕಾರ್ಯಾಚರಣೆ ನಡೆಸಿದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ₹182 ಕೋಟಿ ಮೌಲ್ಯದ ‘ಕ್ಯಾಪ್ಟಗನ್’ ಮಾತ್ರೆಗಳು ಹಾಗೂ ಪೌಡರ್ ವಶಪಡಿಸಿಕೊಂಡಿದ್ದಾರೆ.

ಭಾರತದ ಇತಿಹಾಸದಲ್ಲೇ ‘ಜಿಹಾದಿ ಡ್ರಗ್’ ಎಂದು ಕರೆಯಲಾಗುವ ಈ ಮಾದಕ ವಸ್ತು ಜಪ್ತಿ ಆಗಿರುವುದು ಇದೇ ಮೊದಲ ಬಾರಿಯಾಗಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಈ ಡ್ರಗ್ ಅನ್ನು ಐಸಿಸ್ ಉಗ್ರರು ಭಯವನ್ನು ಮರೆತು ರೋಷಾವೇಶ ಹಾಗೂ ಅತಿಯಾದ ಉದ್ರೇಕದ ಸ್ಥಿತಿಯಲ್ಲಿ ದಾಳಿಗಳನ್ನು ನಡೆಸಲು ಬಳಸುತ್ತಾರೆ ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅಮಿತ್ ಶಾ, ಎನ್‌ಸಿಬಿ ಅಧಿಕಾರಿಗಳ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದು, “ಡ್ರಗ್ಸ್ ವಿರುದ್ಧ ನಮ್ಮ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಗೆ ಇದು ಸಾಕ್ಷಿ” ಎಂದಿದ್ದಾರೆ.

ಏನಿದು ಕ್ಯಾಪ್ಟಗನ್?
▪️ ಸಿರಿಯಾದಲ್ಲಿ ಅಕ್ರಮವಾಗಿ ತಯಾರಾಗುವ ಮಾದಕ ವಸ್ತು
▪️ ಉಗ್ರ ಚಟುವಟಿಕೆಗಳಿಗೆ ಹಣ ಸಂಗ್ರಹಿಸಲು ಬಳಸಲಾಗುತ್ತದೆ
▪️ ಸೇವಿಸಿದವರಿಗೆ ನಿದ್ದೆ, ಹಸಿವು ಕಡಿಮೆಯಾಗಿ ದೀರ್ಘಕಾಲ ಎಚ್ಚರವಾಗಿರಲು ಕಾರಣವಾಗುತ್ತದೆ
▪️ ಭಯ ಕಡಿಮೆಯಾಗಿ ಅತಿಯಾದ ಉದ್ರೇಕ ಮತ್ತು ಆಕ್ರಮಣಕಾರಿ ಮನೋಭಾವ ಹೆಚ್ಚುತ್ತದೆ ಎನ್ನಲಾಗಿದೆ
ಭಾರತಕ್ಕೆ ಈ ಮಾರಕ ಡ್ರಗ್ ಪ್ರವೇಶಿಸಿರುವುದು ಭದ್ರತಾ ಸಂಸ್ಥೆಗಳಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular