ನವದೆಹಲಿ : ಮುಂಬೈ ಮತ್ತು ಅಹ್ಮದಾಬಾದ್ ಮಧ್ಯೆ ನಿರ್ಮಾಣವಾಗುತ್ತಿರುವ ಬುಲಟ್ ರೈಲು ಯೋಜನೆಯ ಪರೀಕ್ಷೆಯ ಭಾಗವಾಗಿ ಜಪಾನ್ ತನ್ನ ಅತಿವೇಗದ ಇ-೫, ಇ-೩ ಶಿಂಕನ್ಸೆನ್ ರೈಲುಗಳನ್ನು ಭಾರತಕ್ಕೆ ಉಚಿತವಾಗಿ ನೀಡಲು ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಪಾನ್ ಅಧಿಕಾರಿಗಳು, ಈ ರೈಲುಗಳು 2026 ಕ್ಕೆ ಭಾರತಕ್ಕೆ ಬಂದಿಳಿಯಲಿವೆ ಮತ್ತು ಮುಂಬೈ-ಅಹಮದಾಬಾದ್ ರೈಲ್ ಸ್ಪೀಡ್ ಕಾರಿಡಾರ್‌ನಲ್ಲಿ ಪರಿಶೀಲನೆಯ ಭಾಗವಾಗಿ ಕಾರ್ಯನಿರ್ವಹಿಸಲಿವೆ. ಕಾರಿಡಾರ್ ಲೋಕಾರ್ಪಣೆಯಾಗುವ ಮೊದಲು ಭಾರತೀಯ ಎಂಜಿನಿಯರ್‌ಗಳಿಗೆ ಶಿಂಕನ್ಸೆನ್ ತಂತ್ರಜ್ಞಾನ ಅರ್ಥೈಸಿಕೊಳ್ಳಲು ಸಹ ಸಹಾಯವಾಗಲಿದೆ ಎಂದಿದ್ದಾರೆ