Thursday, July 23, 2026
Homeರಾಜ್ಯತುಮಕೂರು : ಶ್ರಾವಣ ಶನಿವಾರದಂದು ಪ್ರಸಾದ ಸೇವಿಸಿ ವಾಂತಿ ಭೇದಿ,ಮೂವರು ಮಹಿಳೆಯರು ಸಾವು!

ತುಮಕೂರು : ಶ್ರಾವಣ ಶನಿವಾರದಂದು ಪ್ರಸಾದ ಸೇವಿಸಿ ವಾಂತಿ ಭೇದಿ,ಮೂವರು ಮಹಿಳೆಯರು ಸಾವು!

ತುಮಕೂರು : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಬುಳ್ಳಾಸಂದ್ರ ಗ್ರಾಮದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಗ್ರಾಮದ ಮುತ್ತರಾಯಸ್ವಾಮಿ, ಕರಿಯಮ್ಮ ದೇವರುಗಳಿಗಾಗಿ ಹರಿಸೇವೆ ಕ್ರಾರ್ಯಕ್ರಮ ನಡೆದಿತ್ತು ಇಲ್ಲಿನ ಪ್ರಸಾದ ಸೇವಿಸಿ ಒಂದೇ ಗ್ರಾಮ ಹಾಗೂ ಒಂದೇ ಸಮುದಾಯಕ್ಕೆ ಸೇರಿದ ಮೂವರು ವೃದ್ದ ಮಹಿಳೆಯರು ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮೃತಪಟ್ಟವರನ್ನು ತಿಪ್ಪಮ್ಮ (40), ತಿಮ್ಮಕ್ಕ (85) ಗಿರಿಯಮ್ಮ (75)ಎಂದು ತಿಳಿದುಬಂದಿದೆ. ಕಳೆದ ಶನಿವಾರ ಗ್ರಾಮದಲ್ಲಿ ದೇವರ ಉತ್ಸವ ಆಯೋಜಿಸಲಾಗಿತ್ತು.ಮುತ್ತರಾಯಸ್ವಾಮಿ, ಕರಿಯಮ್ಮ, ಭೂತಪ್ಪ ದೇವರ ಆರತಿ ಉತ್ಸವ ನಡೆದಿತ್ತು. ಹೆಣ್ಣುಮಕ್ಕಳು ಮುತ್ತರಾಯಸ್ವಾಮಿಗೆ ಆರತಿ ಬೆಳಗಿ ಸಂಜೆ ದೇವಸ್ಥಾನದಲ್ಲಿ ಪ್ರಸಾದವಾಗಿ ಅನ್ನ ಸಾಂಬಾರ್, ಹೆಸರು ಬೇಳೆ ಪಾಯಸವನ್ನು ಸ್ವೀಕರಿಸಿದ್ದರು.ಉತ್ಸವದ ವೇಳೆ ಗ್ರಾಮಸ್ಥರು ಪ್ರಸಾದ ಸೇವಿಸಿದ್ದರು. ಪ್ರಸಾದ ಸೇವಿದ್ದರಿಂದ 11 ಜನರು ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದು, ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಗ್ರಾಮದಲ್ಲಿ ತಾತ್ಕಲಿಕವಾಗಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಅಸ್ವಸ್ಥರಿಗೆ ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದಾರೆ. ಮೇಲ್ನೋಟಕ್ಕೆ ಪ್ರಸಾದ ಸೇವಿಸಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮಕ್ಕೆ ತಹಶಿಲ್ದಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular