ಮೇಷ
ಈ ವಾರ ನಿಮಗೆ ಶುಭಕರವಾಗಿದೆ. ಈ ವಾರ ನಿಮ್ಮ ಹಣಕಾಸಿನ ತೊಂದರೆ ಇಲ್ಲವಾಗುವುದು, ಉತ್ತಮ ಅವಕಾಶಗಳು ಸಿಗಲಿವೆ. ಕೆಲಸದಲ್ಲೂ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಲಿದೆ. ನಿರುದ್ಯೋಗಿಗಳಾಗಿದ್ದರೆ ಈ ವಾರ ಕೆಲಸ ದೊರೆಯುವ ಸಾಧ್ಯತೆ ಇದೆ. ಸರ್ಕಾರಿ ಕೆಲಸ ಪಡೆಯುವ ಪ್ರಯತ್ನಕ್ಕೆ ಫಲ ಸಿಗಲಿದೆ. ತಂದೆಯವರೊAದಿಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡಿ, ಅವರಿಗೆ ನೋವುಂಟು ಮಾಡುವ ಮಾತುಗಳನ್ನಾಡಬೇಡಿ.
ವೃಷಭ
ಕೆಲಸದ ದೃಷ್ಟಿಯಿಂದ ನೋಡುವುದಾದರೆ ಈ ವಾರ ಅನುಕೂಲಕರವಾಗಿದೆ. ಈ ಕೆಲಸದಲ್ಲಿ ವಾರ ಕಠಿಣ ಪರಿಶ್ರಮ ಹಾಕಬೇಕಾಗುತ್ತದೆ, ನಿಮ್ಮ ಕೆಲಸ ನೋಡಿ ನಿಮ್ಮ ಮೇಲಾಧಿಕಾರಿ ನಿಮ್ಮೊಂದಿಗೆ ಅವರ ಅನುಭವಗಳನ್ನು ಹೇಳಿಕೊಳ್ಳಬಹುದು ಹಾಗೂ ನಿಮ್ಮನ್ನು ಮತ್ತಷ್ಟು ಚೆನ್ನಾಗಿ ಕೆಲಸ ಮಾಡುವಂತೆ ಹುರಿದುAಬಿಸಬಹುದು.
ಮಿಥುನ
ಈ ವಾರದ ಮೊದಲ ದಿನಗಳು ಸ್ವಲ್ಪ ಕಷ್ಟಕರ ಅನಿಸಬಹುದು. ಕೌಟಂಬಿಕ ಕಲಹ ಉಂಟಾಗಬಹುದು, ಇದರಿಂದ ನಿಮ್ಮ ನೆಮ್ಮದಿ ಹಾಳಾಗಬಹುದು, ಆದರೆ ನಂತರ ದಿನಗಳಲ್ಲಿ ಎಲ್ಲವೂ ಸರಿಯಾಗುವುದು, ಸಂಗಾತಿಯೊAದಿಗೆ ಚೆನ್ನಾಗಿರುವಿರಿ. ನಿಮ್ಮ ತಪ್ಪು ಗಳಿಂದ ಪಾಠ ಕಲಿಯುವಿರಿ. ನಿಮ್ಮ ಸಂಗಾತಿಯ ಜೊತೆ ಗೌರವ ಹಾಗೂ ತಾಳ್ಮೆಯಿಂದ ನಡೆದುಕೊಂಡರೆ ನಿಮ್ಮ ಮೇಲಿರುವ ಅವರ ಪ್ರೀತಿ ಹೆಚ್ಚಾಗುವುದು. ಆರೋಗ್ಯದ ಕಡೆ ಸ್ವಲ್ಪ ಗಮನ ನೀಡಿ.
ಕರ್ಕ
ಈ ವಾರ ನಿಮಗೆ ಅನುಕೂಲಕರವಾಗಿದೆ, ಆದರೂ ಕೆಲವೊಂದು ವಿಷಯಗಳಲ್ಲಿ ಎಚ್ಚರವಹಿಸುವುದು ಒಳ್ಳೆಯದು. ಅಧಿಕ ಕೆಲಸದ ಒತ್ತಡವಿರುತ್ತದೆ. ಉದ್ಯಮಿಗಳು ಈ ವಾರ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು, ನಿಮ್ಮ ಸ್ಪರ್ಧಿಗಳು ಕಠಿಣ ಸ್ಪರ್ಧೆ ನೀಡಬಹುದು, ಇದರ ಹೊರತು ಪಡಿಸಿ ಸ್ವಲ್ಪ ಮಟ್ಟಿಗೆ ಲಾಭ ದೊರೆಯಲಿದೆ. ಹಣಕಾಸಿನ ದೃಷ್ಟಿಯಿಂದ ಹೇಳುವುದಾದರೆ ಈ ವಾರ ಏರಳಿತ ಉಂಟಾಗಲಿದೆ.
ಸಿಂಹ
ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಈ ವಾರ ಆರೋಗ್ಯ ಸಮಬಂಧಿತ ಸಮಸ್ಯೆ ಹೆಚ್ಚಾಗಲಿದೆ, ಆ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಈ ವಾರ ಹೊಸ ಕೆಲಸ ಕಲಿಯುವ ಸಾಧ್ಯತೆ ಇದೆ, ಆದರೆ ಏನೇ ಮಾಡುವ ಮುನ್ನ ಆಲೋಚಿಸಿ ಮಾಡಿ. ಹಣಕಾಸಿನ ದೃಷ್ಟಿಯಿಂದ ಈ ವಾರ ಉತ್ತಮವಾಗಿದೆ. ಆಸ್ತಿ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದರೆ ಈ ವಾರ ಉತ್ತಮ ಲಾಭ ದೊರೆಯಲಿದೆ.
ಕನ್ಯಾ
ಕಳೆದ ವಾರ ಸ್ವಲ್ಪ ಹಣಕಾಸಿನ ತೊಂದರೆ ಕಾಣಿಸಿಕೊಂಡಿರುತ್ತದೆ, ಆದರೆ ಈ ವಾರ ಅವೆಲ್ಲವು ಸರಿಯಾಗುವುದು, ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಪರಿಸ್ಥಿತಿಗೆ ತಕ್ಕಂತೆ ಹಣದ ಖರ್ಚು ನಿಭಾಯಿಸಲು ಯೋಜನೆ ಪ್ರಕಾರ ಹೋಗಿ, ಇಲ್ಲದಿದ್ದರೆ ಸಾಲ ಕೇಳಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ನೀವು ಉದ್ಯೋಗಿಯಾಗಿದ್ದರೆ ನಿಮ್ಮ ಕಾರ್ಯ ಕ್ಷಮತೆ ಹೆಚ್ಚಲಿದೆ. ನಿಮ್ಮ ಕುಟುಂಬದವರೊAದಿಗೆ ಚೆನ್ನಾಗಿ ಕಾಲ ಕಳೆಯುವುರಿ, ಸಣ್ಣ ಪುಟ್ಟ ಸಂಸಾರ ತಾಪತ್ರೆ ಮಾತಿನ ಮೂಲಕ ಪರಿಹರಿಸಿಕೊಳ್ಳಿ. ಈ ವಾರ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ.
ತುಲಾ
ಈ ವಾರ ಕುಟುಂಬದವರೊAದಿಗೆ ಹೆಚ್ಚಿನ ಸಮಯ ಕಳೆಯುವಿರಿ. ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಉಂಟಾಗುವುದರಿAದ ನಿಮ್ಮ ಚಿಂತೆ ದೂರವಾಗಲಿದೆ. ನೀವು ನಿಮ್ಮ ಜವಾಬ್ದಾರಿ ಉತ್ತಮ ರೀತಿಯಲ್ಲಿ ನಿರ್ವಹಿಸುವುದರಿಂದ ಎಲ್ಲರ ಮೆಚ್ಚುಗೆ ಗಳಿಸುತ್ತೀರಿ. ವೈವಾಹಿಕ ಬದುಕು ಉತ್ತಮವಾಗಿರಲಿದೆ. ವಾರದ ಮಧ್ಯದಲ್ಲಿ ಕೆಲವೊಂದು ಸವಾಲುಗಳು ಎದುರಾದರೂ ಆ ಸಮಸ್ಯೆಯಿಂದ ಹೊರಬರುವಿರಿ.
ವೃಶ್ಚಿಕ
ಈ ವಾರ ಮೊದಲಿಗೇ ದೊಡ್ಡ ಸಮಸ್ಯೆ ಬರುವ ಸಾಧ್ಯತೆ ಇದೆ. ಅಧಿಕ ಖರ್ಚು ಬರುವುದರಿಂದ ಬಜೆಟ್‌ನಲ್ಲಿ ಅಸಮತೋಲನ ಉಂಟಾಗಬಹುದು. ಸಾಲ ಪಡೆಯುವ ಪರಿಸ್ಥಿತಿಯೂ ಬರಬಹುದು. ಕುಟುಂಬದ ಜೊತೆಗೆ ನಿಮ್ಮ ಸಂಬAಧ ಚೆನ್ನಾಗಿರುತ್ತದೆ. ಈ ವಾರ ನೀವು ನಿಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತೀರಿ, ಇದರಿಂದ ಗೌರವಕ್ಕೆ ಪಾತ್ರರಾಗುವಿರಿ. ಕಷ್ಟದ ಪರಿಸ್ಥಿತಿಯಲ್ಲಿ ಸಂಗಾತಿಯ ಬೆAಬಲ ದೊರೆಯಲಿದೆ.
ಧನು
ನಿಮ್ಮ ರೊಮ್ಯಾಂಟಿಕ್ ಬದುಕಿನಲ್ಲಿ ಸ್ವಲ್ಪ ಒತ್ತಡ ಉಂಟಾಗಲಿದೆ. ನಿಮ್ಮ ಸಂಗಾತಿಯೊAದಿಗೆ ಭಿನ್ನಾಭಿಪ್ರಾಯ ಉಂಟಾಗುವುದು, ಅದನ್ನು ಸರಿಯಾಗಿ ನಿಭಾಯಿಸದಿದ್ದರೆ ಸಂಬAಧದಲ್ಲಿ ಬಿರುಕು ಉಂಟಾಗುವುದು. ನಿಮಗೆ ಯಾರ ಮೇಲಾದರೂ ಪ್ರೀತಿ ಮೂಡಿದ್ದರೆ ಅದನ್ನು ಹೇಳಲು ಕೆಲವು ದಿನಗಳವರೆಗೆ ಕಾಯುವುದು ಒಳ್ಳೆಯುವುದು. ಈ ವಾರ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ನೌಕರಿ ಜಾಗದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ.
ಮಕರ
ಈ ವಾರ ಅಧಿಕ ಕೆಲಸದ ಒತ್ತಡ ಇರಲಿದೆ, ನಿಮ್ಮ ಕಠಿಣ ಶ್ರಮಕ್ಕೆ ಫಲ ಸಿಗಲಿದೆ. ಉದ್ಯಮಿಗಳಿಗೆ ಈ ವಾರ ಒಳಿತಾಗಲಿದೆ. ಕೆಲಸದ ಜಾಗದಲ್ಲಿ ಸ್ವಲ್ಪ ಸವಾಲುಗಳು ಉದುರಾಗಬಹುದು, ವಾರದ ಮೊದಲ ದಿನಗಳಲ್ಲಿ ತುಂಬಾ ತೊAದರೆ ಅನಿಸಿದರೂ ನಂತರ ಸರಿಯಾಗುವುದು. ಆದರೆ ನಿಮ್ಮ ಸಹೋದ್ಯೋಗಿಗಳ ಬೆಂಬಲ ಸಿಗುತ್ತದೆ. ಆಸ್ತಿ ವಿಚಾರಕ್ಕೆ ಒಡಹುಟ್ಟಿದವರ ಜೊತೆ ಮಾತುಕತೆ ಬರಬಹುದು.
ಕುಂಭ
ಪ್ರೀತಿಯ ವಿಷಯದಲ್ಲಿ ಹೇಳುವುದಾರೆ ಈ ವಾರ ರೊಮ್ಯಾಂಟಿಕ್ ವಾರವಾಗಲಿದೆ. ಯಾರನ್ನಾದರೂ ಪ್ರೀತಿಸುತ್ತಿದ್ದರೆ ಈ ವಾರ ನಿಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಬಹುದು, ನೀವು ಬಯಸಿದ ಪ್ರತಿಕ್ರಿಯೆ ದೊರೆಯುವುದು. ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವುದು. ಬ್ಯುಸಿನೆಸ್ ಬಗ್ಗೆ ಇರುವ ನಿಮ್ಮ ಗೊಂದಲಕ್ಕೆ ತಂದೆಯವರ ಮೂಲಕ ಪರಿಹಾರ ದೊರೆಯುತ್ತದೆ. ಉದ್ಯೋಗಿಗಳಿಗೂ ಈ ವಾರ ಅನುಕೂಲಕರವಾಗಿದೆ.
ವಿದ್ಯಾರ್ಥಿಗಳಿಗೆ ಇದು ಉತ್ತಮ ವಾರವಾಗಿದ್ದು ನಿಮ್ಮ ಗುರಿಗೆ ಪ್ರಯತ್ನಿಸಿದರೆ ಫಲ ಸಿಗುತ್ತದೆ.
ಮೀನ
ಹಣ ದೃಷ್ಟಿಯಲ್ಲಿ ನೋಡುವುದಾದರೆ ಈ ವಾರ ಅದೃಷ್ಟವನ್ನು ತರುತ್ತದೆ, ನಿಮಗೆ ಹಣಕಾಸಿನ ನೆರವು ದೊರೆಯಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಫಲ ಸಿಗುವುದು. ಉದ್ಯಮಿಗಳಿಗೆ ಯಾವುದಾದರೂ ಉದ್ಯಮದಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಫಲ ಸಿಗುತ್ತದೆ. ಈ ವಾರ ವೈಯಕ್ತಿಕ ಬದುಕು ಕೂಡ ಖುಷಿ-ಖುಷಿಯಾಗಿರುತ್ತದೆ. ಅಪೂರ್ಣವಾಗಿದ್ದ ಕೆಲಸ ಪೂರ್ಣವಾಗಲಿದೆ. ಹಿರಿಯರು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡುತ್ತಾರೆ.