Tuesday, July 21, 2026
Homeಕ್ರೀಡೆಟೋಕಿಯೋ : ಜಪಾನ್ ಓಪನ್‌ನಲ್ಲಿ ಪಿ.ವಿ. ಸಿಂಧುಗೆ ಐತಿಹಾಸಿಕ ಕಿರೀಟ ; ಏಳು ವರ್ಷದ ಪ್ರಶಸ್ತಿ...

ಟೋಕಿಯೋ : ಜಪಾನ್ ಓಪನ್‌ನಲ್ಲಿ ಪಿ.ವಿ. ಸಿಂಧುಗೆ ಐತಿಹಾಸಿಕ ಕಿರೀಟ ; ಏಳು ವರ್ಷದ ಪ್ರಶಸ್ತಿ ಬರ ಅಂತ್ಯ.

ಟೋಕಿಯೋ : ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ಮಾಜಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಅವರು ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಐತಿಹಾಸಿಕ ಪ್ರಶಸ್ತಿ ಗೆದ್ದು, ಏಳು ವರ್ಷಗಳ ಬಳಿಕ ಸೂಪರ್-750 ಮಟ್ಟದ ಪ್ರಶಸ್ತಿ ಬರವನ್ನು ಕೊನೆಗೊಳಿಸಿದ್ದಾರೆ.

ಟೋಕಿಯೊದ ಮೆಟ್ರೋಪಾಲಿಟನ್ ಜಿಮ್ನಾಸಿಯಂನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಸಿಂಧು, ಜಪಾನ್‌ನ ಮಾಜಿ ವಿಶ್ವ ನಂ.1 ಹಾಗೂ ನಾಲ್ಕು ಬಾರಿ ಜಪಾನ್ ಓಪನ್ ಚಾಂಪಿಯನ್ ಅಕಾನೆ ಯಾಮಗುಚಿ ಅವರನ್ನು 21-17, 21-17 ನೇರ ಸೆಟ್‌ಗಳಲ್ಲಿ ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಮೊದಲ ಸೆಟ್‌ನಲ್ಲಿ 7-9ರಿಂದ ಹಿನ್ನಡೆಯಲ್ಲಿದ್ದ ಸಿಂಧು, ಸತತ ನಾಲ್ಕು ಅಂಕಗಳನ್ನು ಗಳಿಸಿ ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಎರಡನೇ ಸೆಟ್‌ನಲ್ಲೂ ಆರಂಭದಲ್ಲೇ ಮುನ್ನಡೆ ಸಾಧಿಸಿದ ಸಿಂಧು, ಯಾಮಗುಚಿ ತೀವ್ರ ಪೈಪೋಟಿ ನೀಡಿದರೂ ಕೊನೆಯಲ್ಲಿ ಮೂರು ಮ್ಯಾಚ್ ಪಾಯಿಂಟ್‌ಗಳನ್ನು ಯಶಸ್ವಿಯಾಗಿ ಬಳಸಿಕೊಂಡು ಚಾಂಪಿಯನ್ ಪಟ್ಟ ಅಲಂಕರಿಸಿದರು.

ಜಪಾನ್ ಓಪನ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನೂ ಸಿಂಧು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು 1983ರಲ್ಲಿ ಪ್ರಕಾಶ್ ಪಡುಕೋಣೆ ಫೈನಲ್ ತಲುಪಿದ್ದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಈ ಗೆಲುವಿನೊಂದಿಗೆ ಸಿಂಧು ಏಳು ವರ್ಷಗಳ ಬಳಿಕ ಸೂಪರ್-750 ಅಥವಾ ಅದಕ್ಕಿಂತ ಮೇಲಿನ ಮಟ್ಟದ ಪ್ರಮುಖ ಪ್ರಶಸ್ತಿಯನ್ನು ಜಯಿಸಿ ತಮ್ಮ ಅದ್ಭುತ ಪುನರಾಗಮನವನ್ನು ಸಾಬೀತುಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular