ಚಿಕ್ಕಬಳ್ಳಾಪುರ ; ತಾಲ್ಲೂಕಿನ ಚಾಪುರ ಗ್ರಾಮದ ತಪತೇಶ್ವರ ಬೆಟ್ಟಕ್ಕೆ ಸೋಮವಾರ ಟ್ರೆಕ್ಕಿಂಗ್‌ಗೆ ತೆರಳಿದ್ದ 33 ವಿದ್ಯಾರ್ಥಿಗಳು ಹಾಗೂ ಐವರು ಶಿಕ್ಷಕರು ಜೇನುನೊಣಗಳ ದಾಳಿಯಿಂದ ಗಾಯಗೊಂಡಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕಿನ ವೇಣೂರು ಶಾಲೆಯ 80 ಮಕ್ಕಳ ಗುಂಪಿನ ಭಾಗವಾಗಿದ್ದ ಅವರು ತಮ್ಮ ಶಿಕ್ಷಕರೊಂದಿಗೆ ಚಾರಣಕ್ಕೆ ಬಂದಿದ್ದರು. ಗಾಯಗೊಂಡವರೆಲ್ಲರೂ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.
ಬೇಸಿಗೆಯ ಸೆಖೆಯಿಂದಾಗಿ ಅಥವಾ ಮಕ್ಕಳು ಜೇನುಗೂಡಿಗೆ ಕಲ್ಲು ಎಸೆಯುತ್ತಿದ್ದರಿಂದ ಜೇನುನೊಣಗಳ ದಾಳಿ ಸಂಭವಿಸಿರಬಹುದು ಎಂದು ಹೇಳಲಾಗಿದೆ.