Thursday, July 23, 2026
Homeರಾಜ್ಯಚಿಕ್ಕಮಗಳೂರು : ಲಾಡ್ಜ್​​ನಲ್ಲಿ ರಮೇಶ್ ಎಂದು ಎಡಿಟ್ ಮಾಡಿ ನಕಲಿ ಆಧಾರ್ ಕಾರ್ಡ್ ಬಳಸಿ ಹಿಂದೂ...

ಚಿಕ್ಕಮಗಳೂರು : ಲಾಡ್ಜ್​​ನಲ್ಲಿ ರಮೇಶ್ ಎಂದು ಎಡಿಟ್ ಮಾಡಿ ನಕಲಿ ಆಧಾರ್ ಕಾರ್ಡ್ ಬಳಸಿ ಹಿಂದೂ ಮಹಿಳೆ ಜತೆ ಸಿಕ್ಕಾಕಿಕೊಂಡ ಅಬ್ದುಲ,ಪೊಲೀಸ್ ವಶಕ್ಕೆ..!

ಚಿಕ್ಕಮಗಳೂರು : ಶೃಂಗೇರಿ ಮೂಲದ 38 ವರ್ಷದ ಮಹಿಳೆಯನ್ನು ತನ್ನ ಹೆಂಡತಿ ಎಂದು ಸುಳ್ಳು ಹೇಳಿ ರೂಮ್ ಪಡೆದುಕೊಂಡು ಹಿಂದೂ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡು ವ್ಯಕ್ತಿಯೋರ್ವ ಹಿಂದೂ ಮಹಿಳೆಯನ್ನು ಲಾಡ್ಜ್​ ಗೆ ಕರೆದೊಯ್ದು ಶೃಂಗೇರಿ ಪಟ್ಟಣದಲ್ಲಿ ಜೋಡಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ರಮೇಶ್ ಎಂದು ಎಡಿಟ್ ಮಾಡಿದ ವ್ಯಕ್ತಿಯನ್ನು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮೂಲದ ಮಾಗುಂಡಿಯ ಅಬ್ದುಲ್ ಸಮದ್ ಎಂದು ಗುರುತಿಸಲಾಗಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಇಬ್ಬರು ನಡುವೆ ಸಂಬಂಧ ಇದ್ದು ಗಂಡ ಇಲ್ಲದ ಮಹಿಳೆಗೆ ಅನುಮಾನ ಬಾರದಂತೆ ಅಬ್ದಲ್ ಎನ್ನುವ ಬದಲಿಗೆ ರಮೇಶ್ ಎಂದು ಆಧಾರ್ ಕಾರ್ಡ್ ಎಡಿಟ್ ಮಾಡಿದ್ದಾನೆಂದು ತಿಳಿದುಬಂದಿದೆ. ಮಹಿಳೆ ಜೊತೆ ಶೃಂಗೇರಿ ಮಠದಲ್ಲಿ ರೂಮ್ ಪಡೆಯಲು ಹೋದಾಗ ಸಿಕ್ಕಿಬಿದ್ದಿದ್ದಾನೆ. ನಕಲಿ ಆಧಾರ್ ಕಾರ್ಡ್ ಬಳಸಿದ್ದಲ್ಲೇ ಹಿಂದೂ ಮಹಿಳೆಯನ್ನು ತನ್ನ ಹೆಂಡತಿ ಎಂದು ಹೇಳಿಕೊಂಡು ರೂಮ್ ಪಡೆದಿದ್ದುಈ ಬಗ್ಗೆ ಅನುಮಾನ ಬಂದ ಹಿನ್ನೆಲೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಗಂಡ ಇಲ್ಲದಿದ್ದರಿಂದ ಹಿಂದೂ ಮಹಿಳೆ ಜೊತೆ ಅಬ್ದುಲ್ ಸಮದ್ ಸ್ನೇಹ ಬೆಳೆದಿದೆ. ಈ ವೇಳೆ ಈ ಜೋಡಿ ಸಿಕ್ಕಿಬಿದ್ದಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಶೃಂಗೇರಿ ಮಠದ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನ ಅನ್ವಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular