Thursday, July 23, 2026
Homeರಾಜ್ಯಚಿಕ್ಕಬಳ್ಳಾಪುರ : ಅತಿಯಾದ ವೇಗದಿಂದ ಕಂಟ್ರೋಲ್ ತಪ್ಪಿ ಹೋಟೆಲ್‌ಗೆ ನುಗ್ಗಿದ ಟಿಪ್ಪರ್ ಲಾರಿ, ಅಡುಗೆಭಟ್ಟ,ಕ್ಯಾಶಿಯರ್‌ ಸಾವು.

ಚಿಕ್ಕಬಳ್ಳಾಪುರ : ಅತಿಯಾದ ವೇಗದಿಂದ ಕಂಟ್ರೋಲ್ ತಪ್ಪಿ ಹೋಟೆಲ್‌ಗೆ ನುಗ್ಗಿದ ಟಿಪ್ಪರ್ ಲಾರಿ, ಅಡುಗೆಭಟ್ಟ,ಕ್ಯಾಶಿಯರ್‌ ಸಾವು.

ಚಿಕ್ಕಬಳ್ಳಾಪುರ : ಅತಿ ವೇಗವಾಗಿ ಬರುತ್ತಿದ್ದ ಟಿಪ್ಪರ್‌ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಹೋಟೆಲ್‌ಗೆ ನುಗ್ಗಿದ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ಕೋಲಾರ ವೃತ್ತದ ಬಳಿ ಸಂಭವಿಸಿದೆ.

ಹೋಟೆಲ್‌ವೊಳಗೆ ಕ್ಯಾಶ್‌ ಕೌಂಟರ್‌ನಲ್ಲಿ ಕುಳಿತಿದ್ದ ಕ್ಯಾಶಿಯರ್‌ ಹಾಗೂ ಅಡುಗೆ ಭಟ್ಟ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟಕ್ಯಾಶ್‌ ರನ್ನು ಶಿವಣ್ಣ (55) ಎಂದು ತಿಳಿದುಬಂದಿದೆ . ಅಡುಗೆ ಭಟ್ಟನ ಹೆಸರು ಇನ್ನೂ ಪತ್ತೆಯಾಗಿಲ್ಲ.

ಮಾಡಿಕೆರೆ ಗ್ರಾಮದ ಪ್ರಕಾಶ್ ಎಂಬುವರಿಗೆ ಸೇರಿದ ಹೋಟೆಲ್ ಇದಾಗಿದೆ. ಜಲ್ಲಿ ಕಲ್ಲಿನಡಿ ಕೂಲಿಗಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಜೆಸಿಬಿ ಮೂಲಕ ಕೂಲಿ ಕಾರ್ಮಿಕರನ್ನು ಹೊರತೆಗೆಯಲು ಯತ್ನಿಸುತ್ತಿದ್ದಾರೆ. ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular