Friday, July 24, 2026
Homeರಾಜ್ಯಗಂಗಾವತಿ : ಸಿಎಂ ಬಂಗಾರದ ಪದಕ ವಿಜೇತೆಯ ಮನೆಯ ಮೇಲೆ ಲೋಕಾಯುಕ್ತ ದಾಳಿ.

ಗಂಗಾವತಿ : ಸಿಎಂ ಬಂಗಾರದ ಪದಕ ವಿಜೇತೆಯ ಮನೆಯ ಮೇಲೆ ಲೋಕಾಯುಕ್ತ ದಾಳಿ.

ಗಂಗಾವತಿ : ಉತ್ತಮ ಕರ್ತವ್ಯ ನಿರ್ವಹಣೆಗಾಗಿ ಇದೇ ಕಾಂಗ್ರೆಸ್ ಸಕರ್ಾರದಲ್ಲಿ ಕಳೆದ ವರ್ಷ ಮುಖ್ಯಮಂತ್ರಿಗಳ ಬಂಗಾರದ ಪದಕ ವಿಜೇತೆ ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ರೇಣುಕಮ್ಮ ಎಂಬುವವರ ಗಂಗಾವತಿ ನಿವಾಸ ಹಾಗೂ ಫಾಮರ್್ ಹೌಸ್ ಮೇಲೆ ಬೆಳಗ್ಗೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

ಆದಾಯಕ್ಕಿಂತ ಹೆಚ್ಚು ಆಸ್ರಿ ಹೊಂದಿರುವ ಮಾಹಿತಿ ಮೆರೆಗೆ ದಾಳಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿಯ ದಾಖಲೆ, ನಗ-ನಾಣ್ಯದ ಮಾಹಿತಿ ಪತ್ತೆಯಾಗಿವೆ. ಎಲ್ಲವನ್ನೂ ಪರಿಶೀಲಿಸಿ ಪ್ರಾಥಮಿಕ ತನಿಖೆ ನಂತರ ಮಾಹಿತಿ ಬಹಿರಂಗ ಮಾಡಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಂಗಾವತಿ ನಗರದ ನಿವಾಸ ಮತ್ತು ರಾಯಚೂರು-ಕೊಪ್ಪಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಹೇಮಗುಡ್ಡದ ಟೋಲ್ಗೇಟ್ ಸಮೀಪದ ಎಚ್ಆರ್ಜಿ ನಗರದ (ಲಿಂಗದಳ್ಳಿ) ಫಾಮರ್್ ಹೌಸ್ (ತೋಟದ ಮನೆ) ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

ತೋಟದ ಮನೆ ಹದಿನಾರು ಎಕರೆ ಇದ್ದು, ಸ್ಥಳೀಯ ಮಾರುಕಟ್ಟೆಯ ಮೌಲ್ಯ ಪ್ರತಿ ಎಕರೆಗೆ 70ರಿಂದ 75 ಲಕ್ಷ ರೂಪಾಯಿ ಮೌಲ್ಯವಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ. ರೇಣುಕನಮ್ಮ ಸಧ್ಯಕ್ಕೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಅರಣ್ಯ ಇಲಾಖೆಯ ವಲಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗಂಗಾವತಿಯ ಸಂಗಾಪುರ ರಸ್ತೆಯಲ್ಲಿ ಭವ್ಯವಾದ ಬಂಗಲೆ ಹೊಂದಿರುವ ಅಧಿಕಾರಿ, ಲೋಕಾಯುಕ್ತರು ದಾಳಿ ಮಾಡಿದ ಸಂದರ್ಭದಲ್ಲಿ ರೇಣುಕಾ ಮನೆಯಲ್ಲಿ ಇರಲಿಲ್ಲ ಎಂದು ಗೊತ್ತಾಗಿದೆ. ಲೋಕಾಯುಕ್ತ ಇಲಾಖೆಯ ರಾಯಚೂರು ಎಸ್ಪಿ ಶಶಿಧರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular