Thursday, July 23, 2026
Homeಜಿಲ್ಲೆಕಾಸರಗೋಡು : ಕಲ್ಲಿಕೋಟೆ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಹೊಸ ರೋಬೋಟಿಕ್ಸ್ ಲೇಸರ್ ಯೂರೋಲಜಿ ಕೇಂದ್ರ ಪ್ರಾರಂಭ..!

ಕಾಸರಗೋಡು : ಕಲ್ಲಿಕೋಟೆ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಹೊಸ ರೋಬೋಟಿಕ್ಸ್ ಲೇಸರ್ ಯೂರೋಲಜಿ ಕೇಂದ್ರ ಪ್ರಾರಂಭ..!

ಕಾಸರಗೋಡು : ಕಲ್ಲಿಕೋಟೆ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ  ಹೊಸ ರೋಬೋಟಿಕ್ಸ್, ಲೇಸರ್ ಯೂರೋ ಲಜಿ ಕೇಂದ್ರ ಶುಭಾರಂಭಗೊಂಡಿತು. ಬೇಬಿ ಮೆಮೋರಿಯಲ್ ಹಾಸ್ಪಿಟಲ್ಸ್ ಗ್ರೂಪ್‌ನ ಅಧ್ಯಕ್ಷ ಡಾ.ಕೆ.ಜಿ. ಅಲೆಕ್ಸಾಂಡರ್ ನೂತನ ಕೇಂದ್ರವನ್ನು ಉದ್ಘಾಟಿಸಿ, ರೋಬೋಟಿಕ್ಸ್ ಶಸ್ತ್ರಚಿಕಿತ್ಸೆ ಹಲವು ಪ್ರಯೋಜನಗಳ ಹೊಂದಿದೆ. ಸುಧಾರಿತ ರೋಬೋಟಿಕ್ಸ್ ಮತ್ತು ಲೇಸರ್ ಯೂರೋಲಜಿ ಕೇಂದ್ರದಿಂದ ಅನೇಕ ಪ್ರಯೋಜನಗಳಿವೆ ಎಂದರು.

ರೋಗಿಗಳಿಗೆ ಅತ್ಯಂತ ಆಧುನಿಕ ಮತ್ತು ಪರಿಣಾಮಕಾರಿ ಚಿಕಿತ್ಸೆ ಲಭ್ಯವಾಗಲಿದೆ. ಮೂತ್ರನಾಳ ಮತ್ತು ಪುರುಷ ಸಂತಾನೋತ್ಪತ್ತಿ ವ್ಯವಸ್ಥೆ ನಿರ್ವಹಿಸುವ

ವೈದ್ಯಕೀಯ ಶಾಖೆಯಾದ ಯೂರೋಲಜಿ ಇತ್ತೀಚಿನ ವರ್ಷಗಳಲ್ಲಿ ಕ್ರಾಂತಿಕಾರಿ ಪ್ರಗತಿಯನ್ನು ಕಂಡಿದೆ. ಅವುಗಳಲ್ಲಿ ರೋಬೋಟಿಕ್ಸ್ ನೆರವಿನ ಶಸ್ತ್ರಚಿಕಿತ್ಸೆ ವಿಶೇಷವಾಗಿ ಡಾ.ವಿನ್ಸಿ ಸರ್ಜಿಕಲ್ ಸಿಸ್ಟಮ್‌ನ ಆಗಮನದೊಂದಿಗೆ ಒಂದು ಪ್ರಮುಖ ಬದಲಾವಣೆಯಾಗಿ ಎದ್ದು ಕಾಣುತ್ತಿದೆ ಎಂದು ಆಸ್ಪತ್ರೆ ಸಿಇಒ ಡಾ. ಅನಂತಮೋಹನ್ ಪೈ ತಿಳಿಸಿದರು.

ಹಿರಿಯ ಸಲಹೆಗಾರ ಯುರೋಲಜಿ ತಜ್ಞ ರೋಬೋಟಿಕ್ಸ್ ಮತ್ತು ಕಸಿ ಶಸ್ತ್ರಚಿಕಿತ್ಸಕ ಡಾ.ಕೃಷ್ಣಮೋಹನ್‌ ಆ‌ರ್., ಡಾ.ಹರಿಗೋವಿಂದ್ ಪಿ., ಡಾ.ಪಂಕಜ್ ರೋಬೋಟಿಕ್ಸ್ ಪ್ರಥಮ ಶಸ್ತ್ರಚಿಕಿತ್ಸೆ ನಡೆಸಿದರು. ಡಾ.ರಾಜೇಶ್, ಡಾ.ದೀಪಾ ಅರಿವಳಿಕೆ ತಜ್ಞರಾಗಿ ಪಾಲ್ಗೊಂಡಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular