ಕಡಬ ; ಕೋಡಿಂಬಾಳ ಗುಂಡಿಮಜಲ್ ನಿವಾಸಿ ಮಂಜುನಾಥ್ ಎಂಬವರ ಮಗ 10 ನೇ ತರಗತಿ ವಿದ್ಯಾರ್ಥಿ ಅದ್ವೈತ್ ಶೆಟ್ಟಿ (15) ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನಿನ್ನೆ ಸಂಜೆ ಮನೆಯಿಂದ ನಾಪತ್ತೆಯಾಗಿದ್ದು ,ರಾತ್ರಿಯಿಡೀ ಮನೆಯವರು ಹುಡುಕಾಟ ನಡೆಸಿದರೂ,ಬೆಳಗ್ಗಿನವರೆಗೂ ಬಾಲಕ ಪತ್ತೆಯಾಗಿರಲಿಲ್ಲ.
ಇಂದು ಬೆಳಗ್ಗೆ ಕುಮಾರಧಾರಾ ನದಿಯ ನಾಕೂರು ಗಯ ಎಂಬಲ್ಲಿ ಬ್ಯಾಗ್ ಪತ್ತೆಯಾಗಿದ್ದು,ಪುತ್ತೂರು ಅಗ್ನಿಶಾಮಕ ದಳದಿಂದ ನದಿಯಲ್ಲಿ ಶೋಧ ಕಾರ್ಯಚರಣೆ ನಡೆಯಿತು.
ಈ ವೇಳೆ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಕಡಬ,ಬೆಳ್ಳಾರೆ ಪೋಲೀಸರು ಆಗಮಿಸಿದ್ದಾರೆ.
ವಿಧ್ಯಾರ್ಥಿಯ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.