Thursday, March 27, 2025
Flats for sale
Homeಜಿಲ್ಲೆಉಳ್ಳಾಲ ; ಮನೆಯ ಕಿಟಕಿಗೆ ನೇಣು ಬಿಗಿದು ಯುವಕ ಆತ್ಮಹತ್ಯೆ.ತಾಯಿ ಬೀಡಿ ಬ್ರಾಂಚಿಗೆ ತೆರಳಿದ್ದಾಗ ಕೃತ್ಯ.

ಉಳ್ಳಾಲ ; ಮನೆಯ ಕಿಟಕಿಗೆ ನೇಣು ಬಿಗಿದು ಯುವಕ ಆತ್ಮಹತ್ಯೆ.ತಾಯಿ ಬೀಡಿ ಬ್ರಾಂಚಿಗೆ ತೆರಳಿದ್ದಾಗ ಕೃತ್ಯ.

ಉಳ್ಳಾಲ: ತಾಯಿ ಬೀಡಿ ಬ್ರಾಂಚಿಗೆ ತೆರಳಿದ್ದ ವೇಳೆ ಯುವಕನೋರ್ವ ಮನೆಯ ಕಿಟಕಿಗೆ ಬೈರಾಸಿನಿಂದ ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ಕುಂಪಲ ಮೂರು ಕಟ್ಟೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಕುಂಪಲ ಮೂರು ಕಟ್ಟೆ ನಿವಾಸಿ ಅಕ್ಷಯ್ (25)ಆತ್ಮ ಹತ್ಯೆಗೈದ ದುರ್ದೈವಿ.ಅಕ್ಷಯ್ ತೊಕ್ಕೊಟ್ಟಿನ ಅನು ಮೊಬೈಲ್ ಸೆಂಟರಲ್ಲಿ ಕೆಲಸಕ್ಕಿದ್ದು ಕಳೆದ 20 ದಿವಸಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲೇ ಉಳಿದಿದ್ದನಂತೆ.ಮೊಬೈಲ್ ಶಾಪ್ ಮಾಲಕರು ಕರೆ ಮಾಡಿದರೂ ಅಕ್ಷಯ್ ಕರೆ ಸ್ವೀಕರಿಸುತ್ತಿರಲಿಲ್ಲವಂತೆ.ಇಂದು ಬೆಳಿಗ್ಗೆ ಅಕ್ಷಯ್ ತಾಯಿ ಮನೆ ಹತ್ತಿರದ ಬೀಡಿ ಬ್ರಾಂಚಿಗೆ ಬೀಡಿ ಕೊಡಲು ತೆರಳಿದ್ದ ವೇಳೆ ಅಕ್ಷಯ್ ಮನೆಯ ಹಾಲಿನ ಕಿಟಕಿಗೆ ಬೈರಾಸಿನಿಂದ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದಾನೆ.
ಖಿನ್ನತೆಯಿಂದ ಅಕ್ಷಯ್ ಆತ್ಮ ಹತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.ಮೃತ ಅಕ್ಷಯ್ ತಾಯಿ,ಇಬ್ಬರು ಸಹೋದರಿಯರನ್ನ ಅಗಲಿದ್ದಾರೆ.ಉಳ್ಳಾಲ ಪೊಲೀಸರು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿ ಪ್ರಕರಣ ದಾಖಲಿಸಿದ್ದಾರೆ.

ಕುಂಪಲದಲ್ಲಿ ಸರಣಿ ಮರಣಮೃದಂಗ
ಕುಂಪಲ ಆಶ್ರಯ ಕಾಲನಿಯ ರೂಪದರ್ಶಿ ಪ್ರೇಕ್ಷಳ ಸಾವಿನ ನಂತರ ಈ ಪ್ರದೇಶದಲ್ಲಿ ಸರಣಿ ಸಾವುಗಳು ಸಂಭವಿಸುತ್ತಿವೆ.ಕಳೆದ ವಾರವಷ್ಟೆ ನಂತೂರಿನಲ್ಲಿ ನಡೆದ ಅಪಘಾತದಲ್ಲಿ ಚಿಕ್ಕಪ್ಪನ ಜತೆ ಸ್ಕೂಟರಲ್ಲಿದ್ದ ಕುಂಪಲ ಗುರುನಗರದ ವಿದ್ಯಾರ್ಥಿನಿ ಭೂಮಿಕ(17) ಸಾವನ್ನಪ್ಪಿದ್ದರು.ಕಳೆದ ವರುಷದ ಸೆಪ್ಟೆಂಬರ್ ತಿಂಗಳೊಂದರಲ್ಲೇ ಕುಂಪಲ ಪ್ರದೇಶದ ರಿಕ್ಷಾ ಚಾಲಕರಾದ ಜಯಪ್ರಕಾಶ್(42)ಜಯಂತ್ ಎಸ್.ಕುಂಪಲ(48)ಮತ್ತು ಧನಂಜಯ ರಾವ್ (53) ಎಂಬ ಮೂವರು ಅಕಾಲಿಕವಾಗಿ ಸಾವನ್ನಪ್ಪಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular