ಉಳ್ಳಾಲ : ಸೋಮೇಶ್ವರ ಪುರಸಭೆ ಮತ್ತು ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳಚರಂಡಿ ಸಮಸ್ಯೆ ನೀಗಿಸುವ ಮತ್ತು ರಸ್ತೆಗಳಿಗೆ ಕಾಂಕ್ರೀಟ್ ಅಳವಡಿಸುವ ಮೂಲಕ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿ ದ್ವಾರಕ ನಗರದಲ್ಲಿ ಒಳಚರಂಡಿ ಅಭಿವೃದ್ಧಿ, ಕುಂಪಲ ಕೃಷ್ಣನಗರ ಮೂರನೇ ಅಡ್ಡರಸ್ತೆ, ಬಾಲಕೃಷ್ಣ ಮಂದಿರ ಮುಂಭಾಗ ರಸ್ತೆ, ಮೂರುಕಟ್ಟೆ ಸಮೀಪದ ರಸ್ತೆ, ಆಶ್ರಯ ಕಾಲನಿ-ಯೇನೆಪೊಯ ಸಂಪರ್ಕ ರಸ್ತೆ, ಪಿಲಾರ್ ರಸ್ತೆ ಮತ್ತು ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕನೀರ್ ತೋಟದಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಪರಿಸರದ ಜನರ ಆರೋಗ್ಯ ಮತ್ತು ಹಿತ ಕಾಪಾಡುವ ನಿಟ್ಟಿನಲ್ಲಿ ಬಹುದಿನಗಳ ಬೇಡಿಕೆಯನ್ನಾಧರಿಸಿ ಅಗತ್ಯ ಕಾಮಗಾರಿಗಳನ್ನು ನಡೆಸಲಾಗುತ್ತಿದೆ, ಈಗಾಗಲೇ ವಿವಿಧ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಿದೆ. ಮುಂದೆಯೂ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ ಎಂದು ತಿಳಿಸಿದರು.
ಸೋಮೇಶ್ವರ ಪುರಸಭೆಯ ಮಾಜಿ ಸದಸ್ಯರಾದ ಶಾಲಿನಿ ಶೆಟ್ಟಿ, ನೋವಿತ ಗಟ್ಟಿ, ದೀಪಕ್ ಪಿಲಾರ್, ಪುಷ್ಪಾವತಿ, ಮುಖಂಡರಾದ ದಿನೇಶ್ ಕುಂಪಲ,ಸತೀಶ್, ಪುರುಷೋತ್ತಮ ಶೆಟ್ಟಿ, ಪ್ರೇಮ್ ನಾಥ್ ಕೊಲ್ಯ, ವಿನ್ಸೆಂಟ್, ರಮೇಶ್ ಶೆಟ್ಟಿ, ಯೋಗಿ, ಲೀಲಾ, ಸಾಜಿದ್, ಮಾಜಿ ಸೈನಿಕ ಅನಿಲ್ ಕುಮಾರ್, ಸ್ನೇಹ ಮೊದಲಾದವರು ಉಪಸ್ಥಿತರಿದ್ದರು.