ಉಳ್ಳಾಲ: ಮಾ. 26 ಉಳ್ಳಾಲದಲ್ಲಿ ಎಸ್ಡಿಪಿಐ ಜೊತೆ ಒಳ ಒಪ್ಪಂದದಲ್ಲಿರುವ ಕಾಂಗ್ರೆಸ್ ಕದ್ದು ತಿಂದ ಅನ್ನವನ್ನ ಬೆಕ್ಕಿನ ಮುಖಕ್ಕೆ ಒರೆಸುವ ನಾಯಿಯ ಬುದ್ಧಿಯನ್ನ ಪ್ರದರ್ಶಿಸುತ್ತಿದ್ದು,ಈ ಬಾರಿಯ ವಿದಾನಸಭಾ ಚುನಾವಣೆಯಲ್ಲಿ ಉಳ್ಳಾಲದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.
ಪಂಡಿತ್‌ಹೌಸ್ ನಿಂದ ರಾಜರಾಜೇಶ್ವರಿ ದೇವಸ್ಥಾನ ಸಂಪರ್ಕ ರಸ್ತೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅನುದಾನದಲ್ಲಿ ನಡೆಯಲಿರುವ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ,ವಿದಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರ ಅನುದಾನದಲ್ಲಿ ನಿರ್ಮಾಣಗೊಂಡ ಮುನ್ನೂರು ಕೆ.ಕೆ ಚಿಕನ್ ಸ್ಟಾಲ್‌ನಿಂದ ಸಂತೋಷ್‌ನಗರದ ಕಾಂಕ್ರಿಟ್ ರಸ್ತೆ ಉದ್ಘಾಟನೆ.ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರ ಅನುದಾನದಲ್ಲಿ ಸಂತೋಷ್ ನಗರದಲ್ಲಿ ನಿರ್ಮಾಣಗೊಂಡ ಕಾಂಕ್ರಿಟ್ ರಸ್ತೆಯನ್ನ ಭಾನುವಾರದಂದು ಅವರು ಉದ್ಘಾಟಿಸಿ ಮಾತನಾಡಿದರು.ಬಿಜೆಪಿಯನ್ನ ಎಸ್ಡಿಪಿಐಯ ಬಿ ಟೀಮ್ ಎಂದು ಕಾಂಗ್ರೆಸಿಗರು ಆರೋಪಿಸುತ್ತಿರುವುದು ಹಾಸ್ಯಾಸ್ಪದ.ಕಾಂಗ್ರೆಸ್ ಉಳ್ಳಾಲ ನಗರಸಭೆ ಸೇರಿದಂತೆ ಕ್ಷೇತ್ರದ ಬಹುತೇಕ ಗ್ರಾಮ ಪಂಚಾಯತ್ ಗಳಲ್ಲಿ ಎಸ್ಡಿಪಿಐ ಜೊತೆ ಒಳ ಒಪ್ಪಂದ ಮಾಡಿ ಅಧಿಕಾರ ನಡೆಸುತ್ತಿರುವುದಕ್ಕೆ ಪ್ರತ್ಯಕ್ಷ ನಿದರ್ಶನಗಳಿವೆ.ಶಾಸಕ ಖಾದರ್ ಅವರು ಅಭಿವೃದ್ಧಿ ಕಾಮಗಾರಿಗಳಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಾ ಬಂದಿದ್ದಾರೆ.ಚುನಾವಣೆ ಹತ್ತಿರ ಬಂದಾಗ ರಸ್ತೆ ಶಿಲಾನ್ಯಾಸಗಳಿಗೆ ತೆಂಗಿನ ಕಾಯಿ ಒಡೆದು ಫಲವಿಲ್ಲ.ಈ ಬಾರಿ ಉಳ್ಳಾಲದ ಜನತೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ,ಪ್ರಮುಖರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು,ಧನಲಕ್ಷ್ಮಿ ಗಟ್ಟಿ,ಜಿತೇಂದ್ರ ಶೆಟ್ಟಿ,ಹೇಮಂತ್ ಶೆಟ್ಟಿ,ಯಶವಂತ್ ಅಮೀನ್,ಆನಂದ ಶೆಟ್ಟಿ, ಅನಿಲ್ ಬಗಂಬಿಲ, ಕಿಶೋರ್ ಮುನ್ನೂರು,ಮನೋಜ್ ಪಂಡಿತ್ ಹೌಸ್ ಮೊದಲಾದವರು ಇದ್ದರು.