Thursday, March 27, 2025
Flats for sale
HomeUncategorizedರಿಷಬ್ ಪಂತ್'ಗೆ ಎಚ್ಚರಿಕೆ ನೀಡಿದ ಶ್ರೀಕಾಂತ್ : ಸಾಲು ಸಾಲು ಅವಕಾಶಗಳನ್ನು ವ್ಯರ್ಥ ಮಾಡುತ್ತಿದ್ದೀರಿ.

ರಿಷಬ್ ಪಂತ್’ಗೆ ಎಚ್ಚರಿಕೆ ನೀಡಿದ ಶ್ರೀಕಾಂತ್ : ಸಾಲು ಸಾಲು ಅವಕಾಶಗಳನ್ನು ವ್ಯರ್ಥ ಮಾಡುತ್ತಿದ್ದೀರಿ.

ನವದೆಹಲಿ: ಟೀಂ ಇಂಡಿಯಾದ ಯುವ ಕ್ರಿಕೆಟಿಗ ರಿಷಭ್ ಪಂತ್ ತಮ್ಮ ಅವಕಾಶಗಳನ್ನು ‘ವ್ಯರ್ಥ’ ಮಾಡಿಕೊಳ್ಳುತ್ತಿದ್ದೀರಿ. ನಿಮ್ಮ ಆಟವನ್ನು ಪುನರುಜ್ಜೀವನಗೊಳಿಸಿಕೊಳ್ಳುವ ಅವಶ್ಯಕತೆ ಹೆಚ್ಚಿದೆ ಎಂದು ಬಿಸಿಸಿಐನ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಎಚ್ಚರಿಸಿದ್ದಾರೆ.

ಈ ವರ್ಷ ಸೀಮಿತ-ಓವರ್‌ಗಳ ಕ್ರಿಕೆಟ್‌ನಲ್ಲಿ ಪಂತ್ ಅಧೀನರಾಗಿದ್ದಾರೆ. ಫೆಬ್ರವರಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೇವಲ ಒಂದು ಅರ್ಧ ಶತಕವನ್ನು ಗಳಿಸಿದರು. 2022 ರಲ್ಲಿ ಆಡಿದ 21 ಇನ್ನಿಂಗ್ಸ್‌ಗಳಲ್ಲಿ ಕೇವಲ ಎರಡು ಬಾರಿ 30 ರನ್‌ ಗಡಿಯನ್ನು ದಾಟಿದ್ದಾರೆ ಎಂದರು.

ನ್ಯೂಜಿಲೆಂಡ್ ವಿರುದ್ಧದ T20I ಸರಣಿಯಲ್ಲಿ ಪಂತ್ ಕೇವಲ 17 ರನ್ ಗಳಿಸಿದ್ದಾರೆ. ಆದರೆ ಮೊದಲ ಏಕದಿನ ಪಂದ್ಯದಲ್ಲಿ 15 ರನ್ ಗಳಿಸಿ ಔಟಾದರು. ‘ನೀವು ಈ ಅವಕಾಶಗಳನ್ನು ಹಾಳು ಮಾಡುತ್ತಿದ್ದೀರಿ. ನೀವು ಅಂತಹ ಪಂದ್ಯಗಳಲ್ಲಿ ಕುಸಿದು ಹೋದರೆ ಎಷ್ಟು ಸರಿ? ಮುಂದೆ ವಿಶ್ವಕಪ್ ಬರುತ್ತಿದೆ. ಈಗಾಗಲೇ ಬಹಳಷ್ಟು ಜನರು ಪಂತ್ ರನ್ ಗಳಿಸಲು ಪರದಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇಂತಹ ಮಾತುಗಳಿಂದ ಪಂತ್ ಮೇಲೆ ಒತ್ತಡ ಶುರವಾಗುತ್ತದೆ. ಹೀಗಾಗಿ ತನ್ನನ್ನು ತಾನೇ ಮರುಶೋಧಿಸಿಕೊಳ್ಳಬೇಕು. ಸ್ವಲ್ಪ ಹೊತ್ತು ನಿಂತು ಆಟವಾಡಬೇಕು ಎಂದು ಸಲಹೆ ನೀಡಿದರು.

ಕ್ರೈಸ್ಟ್‌ ಚರ್ಚ್‌ನಲ್ಲಿ ಬುಧವಾರ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದ್ದು ಈ ಪಂದ್ಯದಲ್ಲಿ ಭಾರತ ಗೆದ್ದರೆ ಸರಣಿ ಸಮಬಲ. ನ್ಯೂಜಿಲ್ಯಾಂಡ್ ಗೆದ್ದರೆ ಸರಣಿ ಕೈವಶ.

RELATED ARTICLES

LEAVE A REPLY

Please enter your comment!
Please enter your name here

Most Popular