Saturday, November 23, 2024
Flats for sale
Homeಕ್ರೈಂಹುಬ್ಬಳ್ಳಿ : ನೇಹಾ ಹಿರೇಮಠ ಹತ್ಯೆ ಪ್ರಕರಣ ; ನ್ಯಾಯಾಧೀಶರ ಸಮ್ಮುಖದಲ್ಲಿ ರಕ್ತದ ಮಾದರಿ ಸಂಗ್ರಹಿಸಿ...

ಹುಬ್ಬಳ್ಳಿ : ನೇಹಾ ಹಿರೇಮಠ ಹತ್ಯೆ ಪ್ರಕರಣ ; ನ್ಯಾಯಾಧೀಶರ ಸಮ್ಮುಖದಲ್ಲಿ ರಕ್ತದ ಮಾದರಿ ಸಂಗ್ರಹಿಸಿ DNA ಪರೀಕ್ಷೆ ಮಾಡಲು ಮುಂದಾದ ಸಿಐಡಿ.

ಹುಬ್ಬಳ್ಳಿ: ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳ ತನಿಖೆ ಚುರುಕಾಗಿದೆ. ಇವತ್ತು ಹಂತಕ‌ ಫಯಾಜ್ ಅನ್ನು ನ್ಯಾಯಾಲಯಕ್ಕೆ ಕರೆ ತಂದ ಸಿಐಡಿ ಅಧಿಕಾರಿಗಳು ಡಿಎನ್‌ಎ ಪರೀಕ್ಷೆಗಾಗಿ ರಕ್ತದ ಮಾದರಿ ಸಂಗ್ರಹಿಸಿದ್ದಾರೆ.

ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ‌ ಫಯಾಜ್ ನನ್ನ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಕರೆತಂದು ಹಾಜರುಪಡಿಸಿದ್ದಾರೆ.

ಡಿಎನ್ ಎ ಪರೀಕ್ಷೆಗಾಗಿ ಸಿಐಡಿ‌ ಅಧಿಕಾರಿಗಳು ಫಯಾಜ್ ನನ್ನು ಒಂದನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಗೆ ಕರೆತಂದಿದ್ದು ನ್ಯಾಯಾಧೀಶರ ಸಮ್ಮುಖದಲ್ಲಿ ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ನ್ಯಾಯಾಧೀಶರಾದ ನಾಗೇಶ ನಾಯಕ್ ಅವರ ಸಮ್ಮುಖದಲ್ಲಿ ಫಯಾಜ್ ನ ಡಿ.ಎನ್.ಎ ಪರೀಕ್ಷೆ ನಡೆಸಿದ್ದು ಕಿಮ್ಸ್ ವೈದ್ಯರಿಂದ ಸಿಐಡಿ ಅಧಿಕಾರಿಗಳು ರಕ್ತದ ಮಾದರಿಯನ್ನು ಪಡೆದುಕೊಂಡಿದ್ದು ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ.ಬಳಿಕ ಫಯಾಜ್ ನನ್ನು ಸಿಐಡಿ ಅಧಿಕಾರಿಗಳು ಮತ್ತೆ ರಹಸ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಕೊಲೆ ಆಗಿರೋ ಜಾಗದಲ್ಲಿ ಸ್ಥಳ ಮಹಜರು ಮಾಡುವಾಗ ಕೆಲವೊಂದು ಸುಳಿವು ಸಿಕ್ಕಿರುತ್ತೆ. ಅಲ್ಲಿ ಸಿಗುವಂತ ವಸ್ತುಗಳನ್ನ ಆರೋಪಿ ಫಯಾಜ್‌ ಜೊತೆಗೆ ಹೋಲಿಕೆ ಮಾಡಲಾಗುತ್ತದೆ. ಹೀಗಾಗಿ ಅವುಗಳು ಆರೋಪಿಗೆ ಮ್ಯಾಚ್ ಮಾಡುವ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಈ ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular