Thursday, July 23, 2026
Homeರಾಜ್ಯಹಾಸನ : ಮನೆಯಲ್ಲಿ ಮಲಗಿದ್ದ ವೇಳೆ ನಾಗರಹಾವು ಕಚ್ಚಿ ವ್ಯಕ್ತಿ ಸಾವು..!

ಹಾಸನ : ಮನೆಯಲ್ಲಿ ಮಲಗಿದ್ದ ವೇಳೆ ನಾಗರಹಾವು ಕಚ್ಚಿ ವ್ಯಕ್ತಿ ಸಾವು..!

ಹಾಸನ : ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದು ಮೊದಲ ಮಹಡಿಯ ಕೊಠಡಿಯಲ್ಲಿ ಮಲಗಿದ್ದ ವೇಳೆ ನಾಗರಹಾವು ಕಚ್ಚಿ ಸಾವನಪ್ಪಿದ ಘಟನೆ ಹಾಸನ ಜಿಲ್ಲೆಯ ಹೊರ ವಲಯದ ಬೂವನಹಳ್ಖಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಮೂಲತಃ ಚನ್ನರಾಯಪಟ್ಟಣ ತಾಲ್ಲೂಕು ಮೂಲದ ಗುರು(40) ಎಂದು ತಿಳಿದುಬಂದಿದೆ.

ಎಂದಿನಂತೆ ಪತಿ ಮೊದಲ ಮಹಡಿ ಮಲಗುತ್ತಿದ್ದು ಆ ವೇಳೆ ನಾಗರ ಹಾವು ಮೊದಲ ಮಹಡಿ ಹತ್ತಿ ಗುರುರವರ ಕಾಲಿಗೆ ಕಚ್ಚಿದೆ ಎಂದು ತಿಳಿದುಬಂದಿದೆ. ಪತಿ ಬೆಳಿಗ್ಗೆ 8 ಗಂಟೆ ಆದರೂ ಕೊಠಡಿ ಬಾಗಿಲು ತೆರೆಯದಿದ್ದರಿಂದ ಪತ್ನಿಗೆ ಅನುಮಾನಗೊಂಡು ಕೊಠಡಿ ಬಾಗಿಲು ತೆರೆದಾಗ ಈ ಘಟನೆ ಬೆಳಕಿಗೆ ಬಂದಿದೆ. ಹಾವು ಗುರುರವರ ಕಾಲಿಗೆ ಕಚ್ಚಿ ಕೊಠಡಿಯಲ್ಲೇ ಅಡಗಿದ್ದು ಕೊಠಡಿಯೊಳಗೆ ಇದ್ದ ಹಾವನ್ನು ಉರಗ ತಜ್ಞರು ರಕ್ಷಿಸಿದ್ದಾರೆ. ಮನೆಯ ಯಜಮಾನನ ಹಠಾತ್ ಸಾವಿನಿಂದ ಕುಟುಂಬ ಕಂಗೆಟ್ಟಟ್ಟಿದ್ದು ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular