Monday, July 27, 2026
Homeರಾಜ್ಯಹಾವೇರಿ : ಸಾವಿನಲ್ಲೂ ಒಂದಾದ ದಂಪತಿ : ಪತ್ನಿಯ ಸಾವಿನ ಆಘಾತ ತಾಳಲಾರದೆ ಪತಿ ಸಹ...

ಹಾವೇರಿ : ಸಾವಿನಲ್ಲೂ ಒಂದಾದ ದಂಪತಿ : ಪತ್ನಿಯ ಸಾವಿನ ಆಘಾತ ತಾಳಲಾರದೆ ಪತಿ ಸಹ ನಿಧನ.

ಹಾವೇರಿ : ಪತ್ನಿಯ ಸಾವಿನ ದುಃಖವನ್ನು ತಾಳಲಾರದೆ ಕೆಲವೇ ಗಂಟೆಗಳಲ್ಲಿ ಪತಿಯೂ ಮೃತಪಟ್ಟ ಮನಕಲಕುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ಗ್ರಾಮದಲ್ಲಿ ನಡೆದಿದೆ.

60 ವರ್ಷದ ಶಾಂತಮ್ಮ ಜುಂಜಪ್ಪ ಬಾರ್ಕಿ ಅವರು ರಾತ್ರಿ ಸುಮಾರು 12 ಗಂಟೆ ವೇಳೆಗೆ ನಿಧನರಾದರು. ಪತ್ನಿಯ ಅಗಲಿಕೆಯ ಸುದ್ದಿಯಿಂದ ತೀವ್ರ ದುಃಖಕ್ಕೊಳಗಾದ 70 ವರ್ಷದ ಜುಂಜಪ್ಪ ಅವರು, “ಹೆಂಡತಿ ಇಲ್ಲದೆ ನಾನು ಹೇಗೆ ಬದುಕಲಿ” ಎಂದು ರಾತ್ರಿ ಪೂರ್ತಿ ಕಣ್ಣೀರು ಹಾಕುತ್ತಿದ್ದರು ಎನ್ನಲಾಗಿದೆ.
ಇಂದು ಬೆಳಗ್ಗೆ ಸುಮಾರು 8.30 ಗಂಟೆ ವೇಳೆಗೆ ಜುಂಜಪ್ಪ ಅವರೂ ಕೊನೆಯುಸಿರೆಳೆದಿದ್ದಾರೆ.

ಸುಮಾರು 45 ವರ್ಷಗಳಿಂದ ಅನ್ಯೋನ್ಯ ದಾಂಪತ್ಯ ಜೀವನ ನಡೆಸಿದ್ದ ಈ ದಂಪತಿ, ಸಾವಿನಲ್ಲಿಯೂ ಒಂದಾದರು ಎಂದು ಗ್ರಾಮಸ್ಥರು ಭಾವುಕರಾಗಿದ್ದಾರೆ. ಈ ಘಟನೆ ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular