Sunday, July 26, 2026
Homeರಾಜ್ಯಸುರಪುರ : ಕಲುಷಿತ ನೀರು ಸೇವಿಸಿ 6 ಜನರು ಅಸ್ವಸ್ಥ: ಆಸ್ಪತ್ರೆಗೆ ದಾಖಲು.

ಸುರಪುರ : ಕಲುಷಿತ ನೀರು ಸೇವಿಸಿ 6 ಜನರು ಅಸ್ವಸ್ಥ: ಆಸ್ಪತ್ರೆಗೆ ದಾಖಲು.

ಸುರಪುರ: ಕಲುಷಿತ ನೀರು ಸೇವಿಸಿ ನಾಲ್ವರು ಮಕ್ಕಳು ಇಬ್ಬರು ವಯೋ ವೃದ್ಧರು ಸೇರಿ 6 ಜನರು ಅಸ್ವಸ್ಥರಾದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾಳನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಲಬಾವಿ ಗ್ರಾಮದಲ್ಲಿ ನಡೆದಿದೆ.

ಅಸ್ವಸ್ಥಗೊಂಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸ ಪಡೆಯುತ್ತಿದ್ದು,ಗ್ರಾಮಕ್ಕೆ ರಾತ್ರಿ ವೇಳೆ ವೈದ್ಯರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಶಿವಲಿಂಗ ಸಾಹು ಪಟ್ಟಣಶೆಟ್ಟಿ ಕರವೇ ಯುವ ಘಟಕದ ಅಧ್ಯಕ್ಷ ರಾಜು ಅವರಾದಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಗ್ರಾಮದಲ್ಲಿ ಕುಡಿಯಲು ಬಾವಿ ನೀರೆ ಗತಿಯಾಗಿದ್ದರಿಂದ ಜನರು ಅಸ್ವಸ್ಥರಾಗುತ್ತಿದ್ದಾರೆ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular