ಸಿಯೋಲ್ : ಉತ್ತರ ಕೊರಿಯಾ ಪೂರ್ವ ಕರಾವಳಿಯಲ್ಲಿ ಬಹು ಅಲ್ಪ-ಶ್ರೇಣಿಯ ಖಂಡಾಂತರ
ಕ್ಷಿಪಣಿಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯಾ ಸೇನೆ ಆರೋಪಿಸಿದೆಕಳೆದ ತಿಂಗಳ ಅವಧಿಯಲ್ಲಿ ಉತ್ತರ ಕೊರಿಯಾ ಪದೇ ಪದೇ ಕ್ಷಿಪಣಿ ಹಾರಾಟ ನಡೆಸುತ್ತಿದೆ. ಇದೇ ರೀತಿ ಮುಂದುವರಿಸಿದರೆ ತಕ್ಕ ತಿರುಗೇಟು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ ಕ್ಷಿಪಣಿಗಳು ಪೊ?ಯಂಗ್ಯಾAಗ್‌ನಿAದ ಸ್ಥಳೀಯ ಕಾಲಮಾನ ಬೆಳಿಗ್ಗೆ 7.10 ರ ಸುಮಾರಿಗೆ ಹಾರಿವೆ. ಸಮುದ್ರಕ್ಕೆ ಧುಮುಕುವ ಮೊದಲು ಸುಮಾರು 260 ಕಿ.ಮೀ ಪ್ರಯಾಣಿಸಿವೆ ಎಂದು ದಕ್ಷಿಣ ಕೊರಿಯಾದ ಸೇನೆ ಈ ವಿಷಯವನ್ನು ಬಹಿರಂಗ ಪಡಿಸಿದೆ.
“ಉತ್ತರ ಕೊರಿಯಾದ ಕ್ಷಿಪಣಿ ಉಡಾವಣೆಯನು ಬಲವಾಗಿ ಖಂಡಿಸುತ್ತೇವೆ, ಕೊರಿಯನ್ ಪರ್ಯಾಯ ದ್ವೀಪದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಗಂಭೀರವಾಗಿ ಬೆದರಿಕೆ ಹಾಕುವ ಸ್ಪಷ್ಟ ಪ್ರಚೋದನೆಯಾಗಿದೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಉತ್ತರ ಕೊರಿಯಾದಿಂದ ಕನಿಷ್ಠ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಸುಮಾರು 100 ಕಿ.ಮೀ ಎತ್ತರಕ್ಕೆ 250 ಕಿ.ಮೀ ಗಿಂತ ಹೆಚ್ಚು ಹಾರಿವೆ ಎಂದು ಜಪಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.ದಕ್ಷಿಣ ಕೊರಿಯಾದೊಂದಿಗಿನ ಸಂಬAಧವನ್ನು ಮರುದೃಢೀಕರಿಸಲು ಕಳೆದ ವಾರ ಸಿಯೋಲ್‌ಗೆ ಭೇಟಿ ನೀಡಿದ್ದ ಜಪಾನಿನ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಟೋಕಿಯೊ ಉಡಾವಣೆಯನ್ನು ಬಲವಾಗಿ ಖಂಡಿಸುತ್ತದೆ ಮತ್ತು ಉತ್ತರ ಕೊರಿಯಾ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಿದೆ ಎಂದು ಹೇಳಿದ್ದಾರೆ.