ಸಿಯೋನಿ : ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಹುಲಿ ದಾಳಿಯಿಂದ ಸಾಕು ನಾಯಿಯೊಂದು ತನ್ನ ಮಾಲೀಕನ ಜೀವವನ್ನು ಉಳಿಸಿದೆ. ಪಂಚಮ್ ಎಂಬ ಯುವಕ ರಾತ್ರಿ ಬಹಿರ್ದೆಸೆಗೆ ಕಾಡಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಇದ್ದಕ್ಕಿದ್ದಂತೆ, ಹುಲಿ ಅವನ ಮೇಲೆ ದಾಳಿ ಮಾಡಿದೆ, ಆದರೆ ನಾಯಿಯ ಬೊಗಳುವಿಕೆಯಿಂದ ಹುಲಿ ಹೆದರಿ ಓಡಿದೆ.
ಪಂಚಮ್ ತನ್ನ ಸಹೋದರನ ಸಾಕು ನಾಯಿಯೊಂದಿಗೆ ಕಾಡಿಗೆ ಹೋಗಿದ್ದಾಗ ಹುಲಿ ಅವನ ಮೇಲೆ ದಾಳಿ ಏಕಾಏಕಿ ಮಾಡಿದೆ. ಪಂಚಮ್ ಒಬ್ಬಂಟಿಯಾಗಿರುವುದನ್ನು ಕಂಡು ಹುಲಿ ಅವನ ಮೇಲೆ ಎರಗಿದೆ ಆದರೆ ಸಾಕು ನಾಯಿ ಹುಲಿಯನ್ನು ನೋಡಿ ಹೆದರದೆ ಸಿಕ್ಕಾಪಟ್ಟೆ ಬೊಗಳಿದ್ದು ಹುಲಿಯನ್ನು ಅಲ್ಲಿಂದ ಓಡಿಸಿದೆ.
ಹುಲಿ ದಾಳಿಯ ಸಮಯದಲ್ಲಿ ನಾಯಿ ಬಿಟ್ಟು ಬಿಡದೆ ಬೊಗಳುತಿತ್ತು ಇದು ಗ್ರಾಮಸ್ಥರು ಸ್ಥಳಕ್ಕೆ ಬರುವಂತೆ ಮಾಡಿದೆ.ಹುಲಿ ಪಂಚಮ್ ಅವರ ತಲೆ ಮತ್ತು ಕೈಗೆ ದಾಳಿ ಮಾಡಿದ್ದೂ ಇದರಿಂದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹುಲಿ ನರಭಕ್ಷಕವಲ್ಲ ಎಂದು ಅರಣ್ಯಾಧಿಕಾರಿ ಟಿ ಎಸ್ ಸುಲಿಯಾ ಸ್ಪಷ್ಟಪಡಿಸಿದ್ದಾರೆ. ಪಂಚಮ್ ತನ್ನ ನಾಯಿಯೊಂದಿಗೆ ಇರದಿದ್ದರೆ, ಗಂಭೀರ ಗಾಯಗಳಾಗುವ ಅಪಾಯವಿದ್ದು ಎಂದಿದ್ದಾರೆ .ಇಂತಹ ಘಟನೆ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ನಡೆದಿದ್ದು, ಸ್ಥಳೀಯ ಜನರಲ್ಲಿ ಭಯವನ್ನು ಸೃಷ್ಟಿಸಿದೆ.