Wednesday, August 26, 2026
Homeವಿದೇಶವಾಷಿಂಗ್ಟನ್ : ವಲಸೆ ನೀತಿ ಬಿಗಿ: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇ.15ರಷ್ಟು ಕುಸಿತ..!

ವಾಷಿಂಗ್ಟನ್ : ವಲಸೆ ನೀತಿ ಬಿಗಿ: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇ.15ರಷ್ಟು ಕುಸಿತ..!

ವಾಷಿಂಗ್ಟನ್ : ಅಮೆರಿಕದ ವಲಸೆ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಪರಿಣಾಮ ಅಮೆರಿಕದ ಶಿಕ್ಷಣ ಸಂಸ್ಥೆಗಳಿಗೆ ವ್ಯಾಸಂಗಕ್ಕಾಗಿ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

ಅಮೆರಿಕದ ಸುಮಾರು 1,500 ಶಿಕ್ಷಣ ಸಂಸ್ಥೆಗಳನ್ನು ಪ್ರತಿನಿಧಿಸುವ ಕಾಮನ್ ಆ್ಯಪ್ ವರದಿ ಪ್ರಕಾರ, 2024-25ನೇ ಶೈಕ್ಷಣಿಕ ವರ್ಷದಲ್ಲಿ ಭಾರತದ 3.63 ಲಕ್ಷ ವಿದ್ಯಾರ್ಥಿಗಳು ಅಮೆರಿಕದ ವಿವಿಧ ಪದವಿ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಿದ್ದರು. 2025-26ರಲ್ಲಿ ಈ ಸಂಖ್ಯೆ ಶೇ.15ರಷ್ಟು ಇಳಿಕೆಯಾಗಿ 3.08 ಲಕ್ಷಕ್ಕೆ ತಲುಪಿದೆ.

ವಲಸೆ ನೀತಿಗಳ ಬಿಗಿತದ ಪರಿಣಾಮ ಭಾರತ ಮಾತ್ರವಲ್ಲದೆ, ಅಮೆರಿಕಕ್ಕೆ ತೆರಳುವ ಹಲವು ದೇಶಗಳ ವಿದ್ಯಾರ್ಥಿಗಳ ಅರ್ಜಿಗಳ ಮೇಲೂ ಪರಿಣಾಮ ಬೀರಿದೆ. 2026-27ನೇ ಸಾಲಿನಲ್ಲಿ ವಿದೇಶಿ ವಿದ್ಯಾರ್ಥಿಗಳ ಅರ್ಜಿಗಳ ಪ್ರಮಾಣ ಶೇ.10ರಷ್ಟು ಕುಸಿದಿದೆ ಎಂದು ವರದಿ ತಿಳಿಸಿದೆ.

ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಿರುವುದು ಅಮೆರಿಕದ ವಿಶ್ವವಿದ್ಯಾಲಯಗಳ ಆದಾಯದ ಮೇಲೂ ಪರಿಣಾಮ ಬೀರಿದೆ. 2025-26ರಲ್ಲಿ ವಿದೇಶಿ ವಿದ್ಯಾರ್ಥಿಗಳಿಂದ ಸುಮಾರು ₹39,000 ಕೋಟಿ ಆದಾಯ ಬಂದಿದ್ದರೆ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅದು ₹36,000 ಕೋಟಿಗೆ ಇಳಿಕೆಯಾಗುವ ನಿರೀಕ್ಷೆಯಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular