ವಾಷಿಂಗ್ಟನ್ : ಗ್ರೀನ್ಲ್ಯಾಂಡ್ ಮತ್ತು ಪನಾಮ ಕಾಲುವೆಯ ಮೇಲೆ ಹಿಡಿತ ಸಾಧಿಸಲು ಅಮೇರಿಕಾ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಅಮೆರಿಕಾದ 47 ನೇ ಅಧ್ಯಕ್ಷರಾಗಿ ಇದೇ 20ರಂದು ಅಧಿಕಾರ ಸ್ವೀಕಾರ ಮಾಡಲಿರುವ ಡೊನಾಲ್ಡ್ ಟ್ರಂಪ್ ಗ್ರೀನ್ಲ್ಯಾಂಡ್ ಮತ್ತು ಪನಾಮ ಕಾಲುವೆಯನ್ನು ಸ್ವಾಧೀನಪಡಿಸಿಕೊಳ್ಳುವ ಬಯಕೆ ಹೊರಹಾಕಿದ್ದಾರೆ.
ಗ್ರೀನ್ ಲ್ಯಾಂಡ್ ಮತ್ತು ಪನಾಮ ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕ .ಹೀಗಾಗಿ ಅವುಗಳನ್ನು ವಶಕ್ಕೆ ಪಡೆಯಲು ಬೇಕಾದ ಎಲ್ಲಾ ಕ್ರಮ ಅನುಸರಿಸುವುದಾಗಿ ಅವರು ಹೇಳಿದ್ದಾರೆ. ಸ್ವಾಯತ್ತ ಡ್ಯಾನಿಶ್ ಪ್ರದೇಶ ಅಥವಾ ಕಾಲುವೆಯನ್ನು ಸ್ವಾಧೀನಪಡಿಸಿಕೊಳ್ಳಲು ಮಿಲಿಟರಿ ಅಥವಾ ಆರ್ಥಿಕ ಬಲವನ್ನು ಬಳಸತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಈಗ ಏನನ್ನೂ ಹೇಳಲು ಬಯಸುವುದಿಲ್ಲ ಆದರೆ ಈ ಎರಡೂ ಅಮೆರಿಕಾಕ್ಕೆ ಬಹುಮುಖ್ಯ ಎಂದಿದ್ದಾರೆ.
ಅಮೇರಿಕಾಕ್ಕೆ ಆರ್ಥಿಕ ಭದ್ರತೆಗಾಗಿ ಅಗತ್ಯವಾಗಿದೆ. ಇವುಗಳನ್ನು ಬಿಟ್ಟಕೊಡುವ ಮಾತೇ ಇಲ್ಲ ಎಂದು ಬೇಕು” ಫ್ಲೋರಿಡಾದ ತಮ್ಮ ಮಾರ್ಎ-ಲಾಗೊ ಎಸ್ಟೇಟ್ನಲ್ಲಿ ನಡದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆಗಳಲ್ಲಿ ಎಷ್ಟು ಗಂಭೀರವಾಗಿದ್ದರು ಅಥವಾ ಅದು ಕೇವಲ ಮಾತುಕತೆ ತಂತ್ರವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಡೆನ್ಮಾರ್ಕ್ ಮತ್ತು ಪನಾಮದ ಎರಡೂ ಪ್ರದೇಶವನ್ನು ಬಿಟ್ಟುಕೊಡುವ ಯಾವುದೇ ಸಲಹೆ ತಿರಸ್ಕರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಕೆನಡಾವನ್ನು ಸ್ವಾಧೀನಪಡಿಸಿಕೊಳ್ಳಲ್ಲು ಪ್ರಯತ್ನಿಸುತ್ತೀರಾ ಎಂದು ಕೇಳಿದಾಗ “ಆರ್ಥಿಕ ಬಲ” ವನ್ನು ಬಳಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಗಡಿ ಎರಡು ದೇಶಗಳ ನಡುವೆ ವಿಶ್ವದ ಅತಿ ಉದ್ದವಾಗಿದೆ ಮತ್ತು 17೦೦ ರ ದಶಕದ ಅಂತ್ಯದಲ್ಲಿ ಅಮೇರಿಕಾ ಸ್ಥಾಪನೆಯ ಹಿಂದಿನ ಒಪ್ಪAದಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಅವುಗಳನ್ನು ವಶಕ್ಕೆ ಪಡೆಯುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ.
ಕೆನಡಾವನ್ನು ರಕ್ಷಿಸಲು ಅಮೇರಿಕಾ ಶತಕೋಟಿ ಡಾಲರ್ಗಳನ್ನು ಖರ್ಚು ಮಾಡುತ್ತದೆ ಎಂದು ಮತ್ತು ಕೆನಡಾದ ಕಾರುಗಳು, ಮರದ ದಿಮ್ಮಿ ಮತ್ತು ಡೈರಿ ಉತ್ಪನ್ನಗಳ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.
ಹೊರಹೋಗುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಎರಡು ದೇಶಗಳು ವಿಲೀನಗೊಳ್ಳುವ “ನರಕದಲ್ಲಿ ಸ್ನೋಬಾಲ್ ಅವಕಾಶ” ಇಲ್ಲ ಎಂದು ಹೇಳಿದ್ದು ಆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.