Thursday, November 5, 2026
Homeವಿದೇಶವಾಷಿಂಗ್ಟನ್ : ಅಮೆರಿಕದ ಇತಿಹಾಸದಲ್ಲಿ ಹೊಸ ದಾಖಲೆ : ಮೊದಲ ಬಹಿರಂಗ ಸಲಿಂಗಕಾಮಿ ಸೆನೆಟರ್...

ವಾಷಿಂಗ್ಟನ್ : ಅಮೆರಿಕದ ಇತಿಹಾಸದಲ್ಲಿ ಹೊಸ ದಾಖಲೆ : ಮೊದಲ ಬಹಿರಂಗ ಸಲಿಂಗಕಾಮಿ ಸೆನೆಟರ್ ಆಗಿ ಕ್ರಿಸ್ ಪಾಪಸ್ ಆಯ್ಕೆ.!

ವಾಷಿಂಗ್ಟನ್ : ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ನ್ಯೂ ಹ್ಯಾಂಪ್‌ಶೈರ್‌ನಿಂದ ಸ್ಪರ್ಧಿಸಿದ್ದ 46 ವರ್ಷದ ಕ್ರಿಸ್ ಪಾಪಸ್ ಸೆನೆಟರ್ ಆಗಿ ಆಯ್ಕೆಯಾಗಿದ್ದು, ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಮೊದಲ ಬಹಿರಂಗ ಸಲಿಂಗಕಾಮಿ ಪುರುಷ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಿಪಬ್ಲಿಕನ್ ಪಕ್ಷದ ಮಾಜಿ ಸೆನೆಟರ್ ಜಾನ್ ಇ. ಸುನುನು ಅವರನ್ನು ಸೋಲಿಸುವ ಮೂಲಕ ಕ್ರಿಸ್ ಪಾಪಸ್ ಈ ಸಾಧನೆ ಮಾಡಿದ್ದಾರೆ. ತಮ್ಮನ್ನು ಬಹಿರಂಗವಾಗಿ ಗೇ ಎಂದು ಗುರುತಿಸಿಕೊಂಡಿರುವ ಪಾಪಸ್ ಅವರ ಗೆಲುವು LGBTQ+ ಸಮುದಾಯದ ಹಕ್ಕುಗಳ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲು ಎಂದು ವಿಶ್ಲೇಷಿಸಲಾಗುತ್ತಿದೆ.

ವಿಜಯೋತ್ಸವದ ಭಾಷಣದಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿರುವವರಿಗಾಗಿ ದೇಶದ ಆರ್ಥಿಕತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೋಟ್ಯಧಿಪತಿಗಳಿಗೆ ಈ ಚುನಾವಣೆ ಎಚ್ಚರಿಕೆಯ ಗಂಟೆಯಾಗಲಿದೆ ಎಂದು ವಾಗ್ದಾಳಿ ನಡೆಸಿದರು.ಕ್ರಿಸ್ ಪಾಪಸ್ ಅವರ ಗೆಲುವು ಅಮೆರಿಕದ ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular