Friday, October 9, 2026
Homeವಾಣಿಜ್ಯವಾಷಿಂಗ್ಟನ್ : ಅಮೆಜಾನ್‌ನಿಂದ ಮತ್ತೆ ಉದ್ಯೋಗ ಕಡಿತ : 1,000ಕ್ಕೂ ಕಡಿಮೆ ಉದ್ಯೋಗಿಗಳಿಗೆ ವಜಾ ಭೀತಿ;...

ವಾಷಿಂಗ್ಟನ್ : ಅಮೆಜಾನ್‌ನಿಂದ ಮತ್ತೆ ಉದ್ಯೋಗ ಕಡಿತ : 1,000ಕ್ಕೂ ಕಡಿಮೆ ಉದ್ಯೋಗಿಗಳಿಗೆ ವಜಾ ಭೀತಿ; ಭಾರತೀಯರಿಗೂ ಸಂಕಷ್ಟ!

ವಾಷಿಂಗ್ಟನ್ : ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಇ-ಕಾಮರ್ಸ್ ದೈತ್ಯ ಅಮೆಜಾನ್ ಮತ್ತೊಮ್ಮೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕಂಪನಿಯ ‘ಸ್ಟೋರ್ಸ್’ ವ್ಯವಹಾರ ವಿಭಾಗದಲ್ಲಿ ನಡೆದಿರುವ ಈ ಹೊಸ ಸುತ್ತಿನ ಉದ್ಯೋಗ ಕಡಿತದಿಂದ ಜಾಗತಿಕವಾಗಿ 1,000ಕ್ಕೂ ಕಡಿಮೆ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಭಾರತ ಮತ್ತು ಬ್ರಿಟನ್‌ನಲ್ಲಿರುವ ಅಮೆಜಾನ್ ಉದ್ಯೋಗಿಗಳ ಮೇಲೂ ಈ ಕ್ರಮದ ಪರಿಣಾಮ ಬೀರಿದೆ. ಗ್ರಾಹಕ ಸೇವೆ, ಮಾರುಕಟ್ಟೆ ಬೆಂಬಲ ಹಾಗೂ ಎಂಜಿನಿಯರಿಂಗ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವು ಉದ್ಯೋಗಿಗಳಿಗೆ ಮಂಗಳವಾರ ಉದ್ಯೋಗ ಕಡಿತದ ಕುರಿತು ಮಾಹಿತಿ ನೀಡಲಾಗಿದೆ.

ವೆಚ್ಚ ಕಡಿತಕ್ಕೆ ಅಮೆಜಾನ್ ಕ್ರಮ

ಕಂಪನಿಯ ವೆಚ್ಚಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಮೆಜಾನ್ ಕೈಗೊಂಡಿರುವ ಈ ಕ್ರಮವು ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ವಿಭಾಗಗಳ ಉದ್ಯೋಗಿಗಳಿಗೂ ಇದರ ಪರಿಣಾಮ ತಟ್ಟಿರುವುದು ಗಮನಾರ್ಹವಾಗಿದೆ.

ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತದ ಪ್ರಕ್ರಿಯೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ತಂತ್ರಜ್ಞಾನ ಮತ್ತು ಇ-ಕಾಮರ್ಸ್ ಕ್ಷೇತ್ರಗಳಲ್ಲಿ ಉದ್ಯೋಗ ಭದ್ರತೆಯ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.

ಭಾರತೀಯ ಉದ್ಯೋಗಿಗಳ ಮೇಲೆ ಎಷ್ಟು ಪ್ರಮಾಣದ ಪರಿಣಾಮ ಬೀರಿದೆ ಎಂಬುದರ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular