Thursday, July 23, 2026
Homeಕ್ರೈಂಮೈಸೂರು : ಮಾಜಿ ಕಾರ್ಪೊರೇಟರ್ ಸಹೋದರನ ಬರ್ಬರ ಹತ್ಯೆ.

ಮೈಸೂರು : ಮಾಜಿ ಕಾರ್ಪೊರೇಟರ್ ಸಹೋದರನ ಬರ್ಬರ ಹತ್ಯೆ.

ಮೈಸೂರು : ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯನ ಸಹೋದರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ಉದಯಗಿರಿಯ ಮಾದೇಗೌಡ ವೃತ್ತ ಸಮೀಪ ನಿಮ್ರಾ ಮಸೀದಿ ಬಳಿ ಶುಕ್ರವಾರ ರಾತ್ರಿ ನಡೆದಿದೆ.5ಕ್ಕೂ ಹೆಚ್ಚು ಜನರು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಪಾಲಿಕೆ ಸದಸ್ಯ ಅಯಾಜ್ ಸಹೋದರ ಅಕ್ಮಲ್(45) ಹತ್ಯೆಗೊಳಗಾದ ವ್ಯಕ್ತಿ. ರಾಜೀವ್ ನಗರ ನಿಮ್ರಾ ಮಸೀದಿ ಬಳಿ ಇರುವ ಆರ್ಯ ಬೇಕರಿ ಮುಂಭಾಗ ದ್ವಿಚಕ್ರ ವಾಹನದಲ್ಲಿತೆರಳುತ್ತಿದ್ದ ಅಕ್ಮಲ್ ಅವರನ್ನು ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ.

ಬೆಂಗಳೂರು ಮೂಲದ ವ್ಯಕ್ತಿಗಳಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ವ್ಯಕ್ತಿ ಅಕ್ಮಲ್ ಎಸ್‌ಡಿಪಿಐನಲ್ಲಿ ಗುರುತಿಸಿಕೊಂಡಿದ್ದ.ಕಾರ್ಯಕ್ರಮವೊಂದರಲ್ಲಿ ಫ್ಲೆಕ್ಸ್ ತೆರವು ಮಾಡಿದ ವಿಚಾರದಲ್ಲಿ ಮತ್ತೊಂದು ಗುಂಪಿನ ವರ್ತನೆಯನ್ನ ಖಂಡಿಸಿ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಅಕ್ಮಲ್ ಹೇಳಿಕೆ ನೀಡಿದ್ದರು.ಇದೇ ವಿಚಾರದಲ್ಲಿ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular