ಮುಂಬೈ : ಜಾಗತಿಕ ಮಟ್ಟದಲ್ಲಿ ಮಧ್ಯಪ್ರಾಚ್ಯದ ಬಿಕ್ಕಟ್ಟು ಹೆಚ್ಚಾಗಿರುವುದು ಹಾಗು ಕಚ್ಚಾ ತೈಲ ಬೆಲೆ ವಿಪರೀತ ಏರಿಕೆ ಆಗಿದ್ದರಿಂದ ಸೋಮವಾರ ಷೇರು ಮಾರುಕಟ್ಟೆ ಪ್ರಪಾತಕ್ಕೆ ಕುಸಿದಿದೆ. ವಿದೇಶಿ ಹೂಡಿಕೆದಾರರು ಬಂಡವಾಳವನ್ನು ಹಿಂತೆಗೆದುಕೊAಡಿದ್ದ ರಿAದ ಬಿಎಸ್‌ಇ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕದ ಬಹುತೇಕ ಎಲ್ಲಾ ವಲಯಗಳು ಕೆಂಪು ಬಣ್ಣಕ್ಕೆ ತಿರುಗಿವೆ.
ಸೆನ್ಸೆಕ್ಸ್ 1352.74 ಪಾಯಿಂಟ್ ಇಳಿದಿದೆ. ನಿಫ್ಟಿ ಕೂಡ 422.4 ಪಾಯಿಂಟ್ ಕುಸಿದಿದೆ. ಪ್ರಾರಂಭದಲ್ಲಿ 2294ಪಾಯಿಂಟ್‌ನಷ್ಟು ಕುಸಿದಿದ್ದು, ದಿನದಂತ್ಯಕ್ಕೆ ಕೊಂಚ ಚೇತರಿಸಿಕೊAಡಿತು. ಮಹೀಂದ್ರಾ ಅಂಡ್ ಮಹೀಂದ್ರಾ, ಎಸ್‌ಬಿಐ ಇಂಟರ್‌ಗ್ಲೋಬ್ ಏವಿಯೇಷನ್ ಮುಂತಾದವು ಭಾರೀ ಇಳಿಕೆ ಕಂಡಿವೆ. ಬಿಎಸ್‌ಇ ಸೆಲೆಕ್ಟ್ ಸ್ಮಾಲ್‌ಕ್ಯಾಪ್ ೨.೧೧% ಮುಗ್ಗರಿಸಿದರೆ, ಮಿಡ್‌ಕ್ಯಾಪ್ 2.08% ಇಳಿಯಿತು. ಶುಕ್ರವಾರವೂ ಸೆನ್ಸೆಕ್ಸ್ 1097 ಪಾಯಿಂಟ್ ಕುಸಿದಿತ್ತು. ಸೋಮವಾರ ಇದು ಮುಂದುವರಿದಿದ್ದು, ವಿದೇಶಿ ಹೂಡಿಕೆದಾರರು 6038 ಕೋಟಿ ರೂ.ಗಳನ್ನು ಹಿಂಪಡೆದುಕೊAಡರು.
ಸೆನ್ಸೆಕ್ಸ್ ಎರಡನೇ ದಿನ ಸತತವಾಗಿ ಸೆನ್ಸೆಕ್ಸ್ ಇಳಿಕೆ ಕಂಡಿದ್ದು ದಿನದಾಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್ 77566 ಪಾಯಿಂಟ್‌ನಲ್ಲಿ ನಿಲುಗಡೆಯಾಗಿದೆ. ರೂಪಾಯಿ ಮೌಲ್ಯ ಕುಸಿತ, ಕೊಲ್ಲಿ ಯುದ್ಧ ಮುಖ್ಯಕಾರಣವಾಗಿದ್ದು ದೀರ್ಘಾವಧಿ ಹೂಡಿಕೆದಾರರಿಂದ ಕೆಲ ಐಟಿ, ಫಾರ್ಮಾ ಷೇರು ಖರೀದಿಯಾಗಿದೆ.


