Thursday, April 23, 2026
Flats for sale
Homeಕ್ರೀಡೆಮುಂಬೈ : 20ನೇ ಏಷ್ಯನ್ ಗೇಮ್ಸ್ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ ಗಳಲ್ಲಿ ನೇರ ಪ್ರಸಾರ.

ಮುಂಬೈ : 20ನೇ ಏಷ್ಯನ್ ಗೇಮ್ಸ್ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ ಗಳಲ್ಲಿ ನೇರ ಪ್ರಸಾರ.

ಮುಂಬೈ : ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ (ಎಸ್.ಪಿ.ಎನ್.ಐ) 20 ನೇ ಏಷ್ಯನ್ ಗೇಮ್ಸ್ ಐಚಿ-ನಗೋಯ 2026ರ ಮಾಧ್ಯಮ ಹಕ್ಕುಗಳನ್ನು ಸ್ವಾಧೀನಪಡಿಸಿಕೊಂಡಿದು, ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 4, 2026ರವರೆಗೆ ನಡೆಯಲಿರುವ 20ನೇ ಏಷ್ಯನ್ ಗೇಮ್ಸ್ ಐಚಿ- ನಗೋಯ 2026 ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ ಗಳಲ್ಲಿ ಲೈವ್ ಪ್ರಸಾರವಾಗಲಿದೆ ಮತ್ತು ಸೋನಿ ಲಿವ್ ನಲ್ಲಿ ಸ್ಟ್ರೀಮ್ ಆಗಲಿದೆ.

ಈ ಒಪ್ಪಂದದ ಭಾಗವಾಗಿ ಎಸ್.ಪಿ.ಎನ್.ಐ. ಅತ್ಯಂತ ನಿರೀಕ್ಷೆಯ 20ನೇ ಏಷ್ಯನ್ ಗೇಮ್ಸ್ ಐಚಿ-ನಗೋಯ 2026ರನ್ನು ಭಾರತದಾದ್ಯಂತ ಹಾಗೂ ಭಾರತೀಯ ಉಪಖಂಡದಲ್ಲಿ ಪ್ರಸಾರ ಮಾಡಲಿದೆ. ಭಾರತವು ಈ ಕ್ರೀಡಾಕೂಟಕ್ಕೆ ಐತಿಹಾಸಿಕ ಆವೇಗದಲ್ಲಿ ಮುನ್ನಡೆಯುತ್ತಿದೆ. ಏಷ್ಯನ್ ಗೇಮ್ಸ್ ಹಿಂದಿನ ಆವೃತ್ತಿಯಲ್ಲಿ ಭಾರತವು ಟೂರ್ನಮೆಂಟ್ ನಲ್ಲಿ ತನ್ನ ಅತ್ಯುತ್ತಮ ಸಾಧನೆ ನೀಡಿದ್ದು 107 ಪದಕಗಳನ್ನು ಗೆದ್ದಿತ್ತು; ಇದು ಖಂಡಾAತರ ವೇದಿಕೆಯಲ್ಲಿ ದೇಶದ ಕ್ರೀಡಾ ಶಕ್ತಿಯನ್ನು ಎತ್ತಿ ತೋರಿಸುವ ಮಹತ್ತರ ಸಾಧನೆಯಾಗಿತ್ತು. ಸಾಧನೆ ಮಾಡಿದ ಖ್ಯಾತ ಕ್ರೀಡಾಪಟುಗಳೊಂದಿಗೆ ಹೊಸ ತಲೆಮಾರಿನ ಚಾಂಪಿಯನ್ ಗಳು ಸೇರಿಕೊಳ್ಳುತ್ತಿದ್ದು ಮತ್ತೊಂದು ದಾಖಲೆ ಮುರಿಯುವ ಅಭಿಯಾನಕ್ಕೆ ನಿರೀಕ್ಷೆಗಳು ಅತ್ಯಂತ ಹೆಚ್ಚಾಗಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular