Friday, January 16, 2026
Flats for sale
Homeವಿದೇಶಮಸ್ಕತ್ : ಭಾರತ ಮತ್ತು ಒಮನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ.

ಮಸ್ಕತ್ : ಭಾರತ ಮತ್ತು ಒಮನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ.

ಮಸ್ಕತ್ : ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ಸಮಯದಲ್ಲಿ ಭಾರತ ಮತ್ತು ಒಮನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದ ಮೂಲಕ ಭಾರತದಿಂದ ರಫ್ತಾಗುವ ೯೯.೩೮% ವಸ್ತುಗಳು ಒಮನ್‌ನಲ್ಲಿ ತೆರಿಗೆರಹಿತ ಪ್ರವೇಶ ಪಡೆದುಕೊಳ್ಳಲಿದೆ.

ಈ ಕುರಿತು ಸಮಗ್ರ ಪಾಲುದಾರಿಕೆ ಒಪ್ಪಂದ(ಸಿಇಪಿಎ) ಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಒಮನ್ ಸುಲ್ತಾನ ಹೈಥಂ ಬಿನ್ ತಾರಿಖ್ ಸಮ್ಮುಖದಲ್ಲಿ ಭಾರತದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಮತ್ತು ಒಮನ್ ಸಚಿವ ಖಾಯಿಸ್ ಅಲ್ ಯೂಸೆಫ್ ಸಹಿ ಹಾಕಿದರು. ಇದರಿಂದ ಭಾರತದ ಒಮನ್‌ಗೆ ಭಾರತದ ರಫ್ತಿನಲ್ಲಿ ಮುಂದಿನ 3 ವರ್ಷಗಳಲ್ಲಿ 5೦% ವೃದ್ಧಿಯಾಗುವ ಸಾಧ್ಯತೆ ಇದೆ. ೨೦೨೪-೨೫ರಲ್ಲಿ ಭಾರತದಿಂದ 4೦೦ ಕೋಟಿ ಡಾಲರ್(ಸುಮಾರು ೩೬ ಸಾವಿರ ಕೋಟಿ ರೂ.) ಮೊತ್ತದ ವಸ್ತುಗಳು ರಫ್ತಾಗಿದ್ದವು.

ಸಿಎಪಿಎಯಿಂದ ಭಾರತದ 99.38% ವಸ್ತುಗಳಿಗೆ ಒಮನ್‌ಗೆ ತೆರಿಗೆರಹಿತ ಪ್ರವೇಶ ದೊರೆತರೆ, ಒಮನ್‌ನ 94% ವಸ್ತುಗಳಿಗೆ ಭಾರತ ತೆರಿಗೆಮುಕ್ತವಾಗಲಿದೆ. ಪೆಟ್ರೋಕೆಮಿಕಲ್ಸ್ ವಿಷಯದಲ್ಲಿ ತೆರಿಗೆ ಇಳಿಕೆ ಹಂತಹAತವಾಗಿ ಜಾರಿಯಾಗಲಿದೆ. ಟೆಕ್ಸ್ಟೈಲ್ಸ್, ಚರ್ಮೋತ್ಪನ್ನ, ಪಾದರಕ್ಷೆ, ಆಭರಣ, ಇಂಜಿನಿಯರಿAಗ್ ವಸ್ತುಗಳು, ಪ್ಲಾಸ್ಟಿಕ್, ಫರ್ನೀಚರ್‌ಗಳಿಗೂ ಈ ಒಪ್ಪಂದದಿAದ ಲಾಭ ಆಗಲಿದೆ. ಆರು ತಿಂಗಳ ಹಿAದೆ ಯುನೈಟೆಡ್ ಕಿಂಗ್‌ಡA ಜೊತೆ ಭಾರತ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿತ್ತು. ಒಮನ್ ಜೆ ಎಫ್‌ಟಿಎ ಮಾಡಿಕೊಂಡ ಎರಡನೇ ದೇಶವಾಗಿದೆ.

ಒಪ್ಪಂದದಿAದ ಏನೇನಾಗುತ್ತೆ?
ಮಾರ್ಬಲ್, ಖರ್ಜೂರ, ಪೆಟ್ರೋ ಕೆಮಿಕಲ್ಸ್ ಆಮದಿಗೆ 2೦೦೦ ಟನ್ ಆಮದು ಮಿತಿ ನಿಗದಿಪಡಿಸಲಾಗಿದೆ. ಪಾಲಿಥೀನ್‌ಗೆ 1.5 ಲಕ್ಷ ಟನ್,ಪಾಲಿಪ್ರೊಪಿಲೀನ್‌ಗತೆ 75 ಸಾವಿರ ಟನ್ ಮಿತಿ. ಪ್ರಸ್ತುತ ಭಾರತದಿಂದ ರಫ್ತಾಗುವ 15.33% ವಸ್ತುಗಳಿಗೆ ಶೂನ್ಯ, ಇನ್ನು ಕೆಲವಕ್ಕೆ 5 % ತೆರಿಗೆ ಇದೆ. ಭಾರತದ ಕೃಷಿ ಉತ್ಪನ್ನ, ಡೈರಿ ಉತ್ಪನ್ನ, ಮೀನು,ಮಾಂಸ, ಜೇನುತುಪ್ಪ, ತರಕಾರಿ, ಸಂಸ್ಕರಿತ ವಸ್ತುಗಳಿಗೆ ಹೆಚ್ಚಿನ ಲಾಭ. ಟೆಕ್ಸ್ಟೈಲ್ಸ್ ತೆರಿಗೆ 5 %ನಿಂದ ಶೂನ್ಯಕ್ಕೆ ಇಳಿದಿದ್ದು, ರಫ್ತು 10.9 ಕೋಟಿ ಡಾಲರ್‌ನಿಂದ 43.8 ಕೋಟಿ ಡಾಲರ್‌ಗೆ ಏರುವ ನಿರೀಕ್ಷೆ. ಕಲ್ಲಿದ್ದಲು ರಫ್ತು 180 ಕೋಟಿ ಡಾಲರ್‌ನಿಂದ 720 ಕೋಟಿ ಡಾಲರ್‌ಗೆ ಏರುವ ಅಂದಾಜು. ಕAಪ್ಯೂಟರ್, ವ್ಯಾಪಾರ ಹಾಗೂ ಇನ್ನಿತರ ಕ್ಷೇತ್ರಗಳಿಗೆ ಒಮನ್‌ನಲ್ಲಿ ಭಾರತೀಯ ಯುವಕರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular