ಮಧ್ಯಪ್ರದೇಶ : ಬರ್ಗಿ ಡ್ಯಾಮ್ ನಲ್ಲಿ ಪ್ರವಾಸಿ ಕ್ರೂಸ್ ಮುಳುಗಿದ ದುರಂತದ ಬಳಿಕ ಮನಕಲಕುವ ದೃಶ್ಯ ಕಂಡು ತಾಯಿಯ ಪ್ರೀತಿ ಎತ್ತಿ ತೋರಿಸಿದೆ.
ನಿನ್ನೆ ನಡೆದ ಈ ದುರ್ಘಟನೆಯಲ್ಲಿ ಹಲವರು ಸಾವನ್ನಪ್ಪಿದ್ದು, ಕುಟುಂಬಗಳು ದುಃಖದಲ್ಲಿ ಮುಳುಗಿವೆ. ಘಟನೆ ನಡೆದ ಸುಮಾರು 15 ಗಂಟೆಗಳ ನಂತರ ಸ್ಥಳದಲ್ಲಿ ತಾಯಿ ಮತ್ತು ಮಗ ಒಬ್ಬರನ್ನೊಬ್ಬರು ಬಿಗಿಯಾಗಿ ಅಪ್ಪಿಕೊಂಡಿರುವ ದೃಶ್ಯ ಪತ್ತೆಯಾಗಿದೆ.
ಇಬ್ಬರೂ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಭಯ ವ್ಯಕ್ತವಾಗಿದ್ದರೂ, ಈ ದೃಶ್ಯ ತಾಯಿಯ ಪ್ರೀತಿಯ ಆಳವನ್ನು ತೋರಿಸುವ ಸಂಕೇತವಾಗಿ ಪರಿಣಮಿಸಿದೆ. ಅಪಾಯದ ಕ್ಷಣದಲ್ಲೂ ತಾಯಿ ತನ್ನ ಮಗನನ್ನು ಬಿಡದೆ ಹಿಡಿದಿಟ್ಟಿರುವುದು, ಅವರ ನಡುವಿನ ಅಚ್ಚಳಿಯದ ಬಾಂಧವ್ಯವನ್ನು ತೋರಿಸಿದೆ.
ಈ ಮನಕಲಕುವ ದೃಶ್ಯ ಅನೇಕ ಮಂದಿಯನ್ನು ಭಾವುಕರನ್ನಾಗಿಸಿದ್ದು, ದುರಂತದ ಭೀಕರತೆ ಜೊತೆಗೆ ತಾಯಿಯ ಪ್ರೀತಿಯ ಶಾಶ್ವತತೆಯನ್ನು ಮನದಟ್ಟು ಮಾಡಿಸಿದೆ.


