Wednesday, March 18, 2026
Flats for sale
Homeಕ್ರೈಂಮಂಡ್ಯ : ಫೇಸ್ ಬುಕ್ ಮೋಸದ ಜಾಲಕ್ಕೆ ಸಿಲುಕಿ ಇಂಜಿನಿಯರ್ ವಿದ್ಯಾರ್ಥಿ ನೇಣಿಗೆ ಶರಣು.

ಮಂಡ್ಯ : ಫೇಸ್ ಬುಕ್ ಮೋಸದ ಜಾಲಕ್ಕೆ ಸಿಲುಕಿ ಇಂಜಿನಿಯರ್ ವಿದ್ಯಾರ್ಥಿ ನೇಣಿಗೆ ಶರಣು.

ಮಂಡ್ಯ : ಅಮೇರಿಕಾ ದೇಶದ ವ್ಯಕ್ತಿಯೊಬ್ಬನ ಮೋಸಕ್ಕೆ ಸಿಲುಕಿದ ಇಂಜಿನಿಯರ್ ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.

ಪಾಂಡವಪುರ ಪಟ್ಟಣದ ಕಾಮನಚೌಕದ ನಿವಾಸಿ ಎಚ್.ಷಣ್ಮುಖ (20) ಮೋಸದ ಜಾಲಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.

ಪಾಂಡವಪುರ ಪಟ್ಟಣದ ಕಾಮನಚೌಕದ ನಿವಾಸಿ ಹರೀಶ್ ಎಂಬುವರ ಪುತ್ರ ಎಚ್.ಷಣ್ಮುಖ ಎಂಬ ವಿದ್ಯಾರ್ಥಿ ಮಂಡ್ಯದ ಪಿಇಎಸ್ ಇಂಜಿನಿಯರ್ ಕಾಲೇಜಿನಲ್ಲಿ ಇ ಅಂಡ್ ಸಿ ವಿಭಾಗದಲ್ಲಿ ಐದನೇ ಸೆಮಿಸ್ಟರ್ ವಿದ್ಯಾಭ್ಯಾಸ ಮಾಡುತ್ತಿದ್ದನು.

ಷಣ್ಮುಖನಿಗೆ ಅಮೇರಿಕಾ ದೇಶದ ವ್ಯಕ್ತಿಯೊಬ್ಬ ಫೇಸ್ ಬುಕ್ ಮೂಲಕ ಪರಿಚಯವಾಗಿ ನಾಲ್ಕೈದು ಲಕ್ಷರೂ ಆನ್ ಲೈನ್ ಮೂಲಕ ಹಣ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿ ಷಣ್ಮುಖ ಸ್ವಂತ ತಾಯಿ ತಂದೆಯ ಚಿನ್ನಾಭರಣವನ್ನು ಅಡವಿಟ್ಟು ಲಕ್ಷಾಂತರ ರೂಗಳನ್ನು ಅಮೇರಿಕಾ ಮೂಲದ ವ್ಯಕ್ತಿಗೆ ಆನ್ ಲೈನ್ ಮೂಲಕ ಹಣ ಕೊಟ್ಟಿದ್ದಾರೆ.

ಅಮೇರಿಕಾ ದೇಶದ ವ್ಯಕ್ತಿಯಿಂದ ಮೋಸಕ್ಕೆ ಒಳಗಾಗಿದ್ದ ಇಂಜಿನಿಯರ್ ವಿದ್ಯಾರ್ಥಿ ಷಣ್ನುಖ ಹಣ ವಾಪಸ್ಸು ಆಗದಿದ್ದಾಗ ಭಯಗೊಂಡು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮೋಸಕ್ಕೆ ಒಳಗಾಗಿರುವ ಸಂಪೂರ್ಣ ವಿಷಯ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ, ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಭೇಟಿ ನೀಡಿ, ಪರಿಶೀಲಿಸಿ, ಡೆತ್ ನೋಟ್, ಮೊಬೈಲ್ ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನೊಂದ ತಂದೆ ಹರೀಶ್ ಅವರು ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular