ಮಂಗಳೂರು : ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮೂಲಕ ₹4,500 ಕೋಟಿಗೂ ಹೆಚ್ಚು ವಂಚನೆ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಾನಂದ ನೀಲಣ್ಣವರ ಅವರನ್ನು ಸೋಮವಾರ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಬಹುಕೋಟಿ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ED) ವಶದಲ್ಲಿರುವ ಶಿವಾನಂದ ನೀಲಣ್ಣವರ, ಬೆಳಗಾವಿ ಸುತ್ತಮುತ್ತ ಸ್ಕೀಮ್ಗಳ ಮೂಲಕ ಹಣ ಸಂಗ್ರಹಿಸಿ ವಂಚನೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.
ED ಅಧಿಕಾರಿಗಳು ಆರೋಪಿಯನ್ನು ಮಂಗಳೂರು ಕೋರ್ಟ್ಗೆ ಹಾಜರುಪಡಿಸಿ, ಬಳಿಕ ಕರೆದೊಯ್ದಿದ್ದಾರೆ.

